ಐವರ್ನಾಡು ಸ.ಹಿ.ಪ್ರಾ.ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ – ಉಚಿತ ನೋಟ್ ಪುಸ್ತಕ ವಿತರಣೆ

0

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಐವರ್ನಾಡಿನಲ್ಲಿ ವಿಶ್ವ ಯೋಗ ದಿನಾಚರಣೆ , ಸುಂದರ ಭಾರತ ಟ್ರಸ್ಟ್ ಬೆಂಗಳೂರು ಇದರ ವತಿಯಿಂದ ನೀಡಿದ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮ ಹಾಗೂ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಇದರ ವತಿಯಿಂದ ಚಿಣ್ಣರ ಚಿಲಿಪಿಲಿ ಗೀತ ಗಾನ ಯಾನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಎಸ್ ಡಿ .ಎಂ ಸಿ ಅಧ್ಯಕ್ಷರು, ಸರ್ವ ಸದಸ್ಯರು, ಶಾಲಾ ಮುಖ್ಯೋಪಾಧ್ಯಾಯಿನಿ, ಶಿಕ್ಷಕ ವೃಂದ ಶಾಲೆಯ ಎಲ್ಲ ಮಕ್ಕಳು ಭಾಗವಹಿಸಿದ್ದರು. ಗೀತ ಗಾಯನ ಸಂಪನ್ಮೂಲ ವ್ಯಕ್ತಿಗಳಾಗಿ ಕೆ.ಆರ್ ಗೋಪಾಲಕೃಷ್ಣ ನಿವೃತ್ತ ಪ್ರಾಂಶುಪಾಲರು ಹಾಗೂ ಶ್ರೀಮತಿ ಮಮತಾ CRP ಸುಳ್ಯ ಇವರು ಸಹಕರಿಸಿದರು. ಉಚಿತ ನೋಟ್ ಪುಸ್ತಕಗಳನ್ನು ಹೊನ್ನಪ್ಪ ಉದ್ದಂಪಾಡಿ ಎಸ್.ಡಿಎಂ.ಸಿ ಅಧ್ಯಕ್ಷರು ವಿತರಿಸಿದರು.

ಪ್ರಾಣಾಯಾಮ ಮತ್ತು ಯೋಗಾಸನಗಳನ್ನು ಯೋಗ ಶಿಕ್ಷಕಿ ಶ್ರೀಮತಿ ಮಾಲತಿ ಹಾಗೂ ಶಿಕ್ಷಕ ವೃಂದ ಮಾಡಿಸಿದರು.