
ಸುಳ್ಯ ರೋಟರಿ ಪ್ರೌಢ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಜೂ.
21 ರಂದು ಆಚರಿಸಲಾಯಿತು.

ಸಮಾರಂಭದಲ್ಲಿ ರೋಟರಿ ಚಾರಿಟೇಬಲ್ ಟ್ರಸ್ಟಿನ ಖಜಾಂಚಿ ರೊ.ಮಧುಸೂದನ್ ಕುಂಭಕೋಡು ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರೊ.ಲತಾ ಮಧುಸೂದನ್ ದೀಪ ಬೆಳಗಿಸಿ, ಉದ್ಘಾಟಿಸಿ ವಿಶ್ವ ಯೋಗ ದಿನಾಚರಣೆಯ ಮಹತ್ವ ಹಾಗು ಯೋಗದ ಉಪಯೋಗವನ್ನು ತಿಳಿಸಿದರು. ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಶೇಡಿಕಜೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.















ರಾಷ್ಟ್ರಮಟ್ಟದಲ್ಲಿ ಮಿಂಚಿದ ಯೋಗ ಪಟುಗಳೂ , ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾದ ಕು.ಕ್ಷಮಾ ಹಾಗೂ ಮಾಸ್ಟರ್ ತನುಷ್ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಾತ್ಯಕ್ಷಿಕೆ ನಡೆಸಿಕೊಟ್ಟು , ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.
ವಿದ್ಯಾರ್ಥಿಗಳಾದ ಸಂಭ್ರಮ್ ಕೆ.ಎಸ್,ನಿಖಿತಾ.ಎಂ.ಎಸ್, ಆಯಿಷತ್ ಆದಿಲ , ನಫೀದ ಅಬ್ದುಲ್ ಮಜೀದ್ , ಮೊಹಮ್ಮದ್ ಅನಸ್ , ಚಿನ್ಮಯ್ ಯೋಗ ದಿನದ ಕುರಿತು ಮಾತನಾಡಿದರು.ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಶೋಭಾ ಬೊಮ್ಮೆಟ್ಟಿ , ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ.ರಂಗನಾಥ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಾದ ಕು.ಮೇಘನ ಹಾಗೂ ಅನನ್ಯ ಪ್ರಾರ್ಥಿಸಿದರು.
ಕು. ಶ್ರೀದುರ್ಗಾ ಸ್ವಾಗತಿಸಿದರು. ಕು.ಸಿಲ್ಮಿಯ ವಂದಿಸಿದರು. ಕು.ವಂದಿತಾ ವಿ.ಎಸ್. , ಕು.ಚರಿಷ್ಮಾ ಕಾರ್ಯಕ್ರಮ ನಿರೂಪಿಸಿದರು.
ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.










