ಅಧ್ಯಕ್ಷ: ಗುರು ಪ್ರಸಾದ್ ತೋಟ
ಕಾರ್ಯದರ್ಶಿ: ಜೀವನ್ ಶೆಟ್ಟಿಗದ್ದೆ
ಖಜಾಂಜಿ : ಜನಾರ್ಧನ ನಾಗತೀರ್ಥ
ಪಂಜ ಪರಿಸರದ 2025 ನೇ ಸಾಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆಯು ಅಗಸ್ಟ್ 27, 28, 29 ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾಭವನದಲ್ಲಿ ಅದ್ದೂರಿಯಾಗಿ ಜರುಗಲಿದೆ. ಆ ಪ್ರಯುಕ್ತ ಪೂರ್ವಭಾವಿ ಸಭೆ- ಉತ್ಸವ ಸಮಿತಿ – 2025 ರಚನೆ ಜೂ.21 ರಂದು ಪಂಜ ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ಪಂಜ ಸಾರ್ವಜನಿಕ ಆರಾಧನಾ ಸಮಿತಿ ಅಧ್ಯಕ್ಷ ಸವಿತಾರ ಮುಡೂರು ರವರ ಸಭಾಧ್ಯಕ್ಷತೆ ಯಲ್ಲಿ ನಡೆಯಿತು.















ನೂತನ ಅಧ್ಯಕ್ಷರಾಗಿ ಗುರು ಪ್ರಸಾದ್ ತೋಟ, ಕಾರ್ಯದರ್ಶಿಯಾಗಿ ಜೀವನ್ ಶೆಟ್ಟಿಗದ್ದೆ, ಖಜಾಂಜಿಯಾಗಿ ಜನಾರ್ಧನ ನಾಗತೀರ್ಥ, ಉಪಾಧ್ಯಕ್ಷರಾಗಿ ತೀರ್ಥಾನಂದ ಕೊಡೆಂಕಿರಿ, ಜೊತೆ ಕಾರ್ಯದರ್ಶಿಯಾಗಿ ಶಶಿ (ತಾರನಾಥ) ದಾಸ್ ನಾಗತೀರ್ಥ, ಕುಸುಮಾಧರ ಕರಿಮಜಲು , ವಿವಿಧ ಸಮಿತಿಗಳ ಸಂಚಾಲಕರನ್ನು ಆಯ್ಕೆ ಮಾಡಲಾಯಿತು. ಆರ್ಥಿಕ ಸಮಿತಿ ವಾಸುದೇವ ಮೇಲ್ಪಾಡಿ, ಕಾರ್ಯಕ್ರಮ ಸಂಯೋಜಕ ಸಮಿತಿ ಕುಮಾರಸ್ವಾಮಿ ಕೆ ಎಸ್, ಪ್ರಸಾದ ಸಮಿತಿ ಚೇತನ್ ಮುಡೂರು, ಸಾಂಸ್ಕೃತಿಕ ಸ್ಪರ್ಧೆ ಸತೀಶ್ ಪಂಜ, ಪ್ರಚಾರ ಸಮಿತಿ ಪ್ರಕಾಶ್ ಅಳ್ಪೆ, ಕ್ರೀಡಾ ಸ್ಪರ್ಧೆ ಹಿತೇಶ್ ಪಂಜದಬೈಲು, ಬೀದಿ ಅಲಂಕಾರ ವಿದ್ಯಾನಂದ ಮೇಲ್ಮನೆ, ಪ್ರತಿಷ್ಠೆ ಬಿ ಎಂ ಎಸ್ ಆಟೋ ಘಟಕ ಪಂಜ, ಶೋಭಾಯಾತ್ರೆ ಪವನ್ ಪಲ್ಲತ್ತಡ್ಕ, ಸಾಂಸ್ಕೃತಿಕ ಪ್ರದರ್ಶನ ಸೋಮಶೇಖರ ನೇರಳ, ಸ್ವಯಂ ಸೇವಾ ನಾರಾಯಣ ಶಿರಾಜೆ, ಸಭಾ ನಿರ್ವಹಣೆ ಜೇಸಿಐ ಪಂಜ ಪಂಚಶ್ರೀ, ಸಭಾಂಗಣ ವ್ಯವಸ್ಥೆ ಸುಜಿತ್ ಪಂಬೆತ್ತಾಡಿ, ಅಲಂಕಾರ ಸಮಿತಿ ಅಶ್ವಥ್ ಬಾಬ್ಲುಬೆಟ್ಟು, ಧ್ವನಿ-ಬೆಳಕು ಚಂದ್ರ ಪಲ್ಲೋಡಿ, ಸೇವಾ ಕೌಂಟರ್ ಲೋಕನಾಥ ಕುದ್ವ, ಆಮಂತ್ರಣ ಮುದ್ರಣ ತೀರ್ಥಾನಂದ ಕೊಡೆಂಕಿರಿ, ಬಹುಮಾನ ವಿತರಣೆ ಕಾರ್ತಿಕ್ ಐ ವಿ, ಜಾಹೀರಾತು ಪ್ರಯೋಜಕರ ಸಂಪರ್ಕ ಸಂತೋಷ್ ಜಾಕೆ, ಆಹಾರ ಸಮಿತಿ ಕುಸುಮಾದರ ಕೆರೆಯಢ್ಕ, ಭಜನಾ ಸಂಕೀರ್ತನೆ ಶ್ರೀಮತಿ ಸರಿತಾ ಪೆರ್ಮಾಜೆ, ಪೂಜೆ ರೋಹಿತ್ ಚೀಮುಳ್ಳು, ಖರೀದಿ ವಿಭಾಗ ತೀರ್ಥಪ್ರಸಾದ ಪಲ್ಲತ್ತಡ್ಕ, ಸಂಪರ್ಕ ಸಮಿತಿ: ಬಳ್ಪ ಗ್ರಾಮ ಹರ್ಷಿತ್ ಪಂಡಿ, ಐವತ್ತೊಕ್ಲು ಗ್ರಾಮ ನಾಗಮಣಿ ಕೆದಿಲ, ಕೂತ್ಕುಂಜ ಗ್ರಾಮ ವಿಶ್ವನಾಥ ಸಂಪ, ಕೇನ್ಯ ಗ್ರಾಮ ಲೋಕೇಶ್ ಅಮ್ಮಾಜೆ, ಪಂಬೆತ್ತಾಡಿ ಗ್ರಾಮ ಜಗದೀಶ್ ಮಠ, ಕಲ್ಮಡ್ಕ ಗ್ರಾಮ ಪುನೀತ್ ಮೂಲೆಮನೆ ಆಯ್ಕೆಯಾದರು. ಇದೇ ವೇಳೆ ವಿವಿಧ ಸಮಿತಿಗಳಿಗೆ ಸದಸ್ಯರ ಆಯ್ಕೆ ಮಾಡಲಾಯಿತು.
ವೇದಿಕೆಯಲ್ಲಿ ಪಂಜ ಸಾರ್ವಜನಿಕ ಆರಾಧನಾ ಸಮಿತಿ ಕಾರ್ಯದರ್ಶಿ ಜಯರಾಮ ಕಲ್ಲಾಜೆ, ಖಜಾಂಜಿ ಆನಂದ ಗೌಡ ಜಳಕದಹೊಳೆ, ಗಣೆಶೋತ್ಸವ ಸಮಿತಿ ಅಧ್ಯಕ್ಷ ಗುರು ಪ್ರಸಾದ್ ತೋಟ, ಕಾರ್ಯದರ್ಶಿ ಜೀವನ್ ಶೆಟ್ಟಿಗದ್ದೆ, ಖಜಾಂಜಿ ಜನಾರ್ದನ ನಾಗತೀರ್ಥ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪಂಜ ಸಾರ್ವಜನಿಕ ಆರಾಧನಾ ಸಮಿತಿ ಅಧ್ಯಕ್ಷ ಸವಿತಾರ ಮುಡೂರು ಸ್ವಾಗತಿಸಿದರು. ಜಯರಾಮ ಕಲ್ಲಾಜೆ ವಂದಿಸಿದರು.










