- ೨೦೨೫-೨೬ ನೇ ಸಾಲಿನ SMAM ಯೋಜನೆಯಡಿ ಯಂತ್ರೋಪಕರಣ ಖರೀದಿಸಲು (ಕಾರ್ಬನ್ ಫೈಬರ್ ದೋಟಿ ಹೊರತುಪಡಿಸಿ) ಶೇಕಡ ೪೦ ರಂತೆ ಸಾಮಾನ್ಯ ರೈತರಿಗೆ ಹಾಗೂ ಮಹಿಳೆ / ಸಣ್ಣ ಅತಿ ಸಣ್ಣ / ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ರೈತರಿಗೆ ಶೇಕಡ ೫೦ ರಂತೆ ಸಹಾಯಧನ ಲಭ್ಯವಿದ್ದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಸುಳ್ಯ ಕಛೇರಿಗೆ ದಿ:೩೦/೦೬/೨೦೨೫ ರೊಳಗೆ ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ಪರಿಶೀಲಿಸಿ ಕಾರ್ಯದೇಶ ನೀಡಿದ ನಂತರ ರೈತರು ಅನುಮೋದಿತ / ಎಂಪ್ಯಾನಲ್ ಸಂಸ್ಥೆಗಳಿಂದ ಖರೀದಿ ಮಾಡಲು ಪೂರ್ಣ ಮೊತ್ತವನ್ನು NEFT / RTGS ಮುಖಾಂತರ ಸಂಸ್ಥೆಗೆ ಪಾವತಿಸಿದ ರಶೀದಿ ಹಾಗೂ ಸಂಬಂಧಪಟ್ಟ ಕಂಪೆನಿ / ಸಂಸ್ಥೆಯಿಂದ ಹಣ ಪಾವತಿಸಿದ ಬಗ್ಗೆ ದೃಢೀಕರಣದೊಂದಿಗೆ ಕಾರ್ಯದೇಶ ನಂತರದ ದಿನಾಂಕದ ಖರೀದಿ ಬಿಲ್ಲು ಪಡೆದು ಈ ಕೆಳಗಿನ ದಾಖಲಾತಿಯೊಂದಿಗೆ ನೀಡಬೇಕು.
ಅರ್ಜಿಯೊಂದಿಗೆ ಲಗತ್ತಿಸಬೇಕಾದ ವಿವರಗಳು ಈ ಕೆಳಗಿನಂತೆ ಇರುತ್ತದೆ.
ಚಾಲ್ತಿಯಲ್ಲಿರುವ ಅರ್ಜಿದಾರರ ರಾಷ್ಟ್ರೀಕೃತ ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್.
ಸಣ್ಣ ಅತಿ ಸಣ್ಣ ರೈತ ಪ್ರಮಾಣ ಪತ್ರ ತಹಶೀಲ್ದಾರರಿಂದ
ಆಧಾರ್ ಕಾರ್ಡ್ ಜೆರಾಕ್ಸ್.
ಜಾತಿ ಪ್ರಮಾಣ ಪತ್ರ (ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ರೈತರಿಗೆ)
ಆರ್.ಟಿ.ಸಿ., (ಜಂಟಿ ಖಾತೆ ಹೊಂದಿದ್ದಲ್ಲಿ, ಉಳಿಕೆದಾರರಿಂದ ಒಪ್ಪಿಗೆ/ಜಿ.ಪಿ.ಎ. ಪತ್ರ.)
error: Content is protected !!