ಕೆವಿಜಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಕಚೇರಿ ಅಧೀಕ್ಷಕರಾಗಿ, ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ಕಳೆದ ಮೇ. 31ರಂದು ಸೇವಾ ನಿವೃತ್ತಿ ಹೊಂದಿದ ಭವಾನಿಶಂಕರ ಅಡ್ತಲೆಯವರು ಎ.ಒ.ಎಲ್.ಇ. ಕಮಿಟಿ ಬಿ ಇದರ ಆಡಳಿತದಡಿಯಲ್ಲಿ ಬರುವ ವಿದ್ಯಾಸಂಸ್ಥೆಗಳು ಮತ್ತು ಕೆವಿಜಿ ಚಾರಿಟಬಲ್ ಟ್ರಸ್ಟ್ ನ ನೂತನ ಆಡಳಿತಾಧಿಕಾರಿಯಾಗಿ ಜೂ. 9ರಿಂದ ನೇಮಕಗೊಂಡಿರುತ್ತಾರೆ.















ಈ ಹಿಂದೆ 1999ರಿಂದ 2009ರ ವರೆಗೆ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ನ ಪ್ರಧಾನ ಕಾರ್ಯದರ್ಶಿಗಳಾದ ಡಾ. ರೇಣುಕಾಪ್ರಸಾದ್ ಕೆ.ವಿ.ಯವರ ಆಪ್ತ ಸಲಹೆಗಾರರಾಗಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಇವರು 2009ರಿಂದ 2025ರ ಮೇ. 31ರ ವರೆಗೆ ಸುಮಾರು 16ವರ್ಷಗಳ ಕಾಲ ಕೆವಿಜಿ ಐಟಿಐಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ, ಕಚೇರಿ ಅಧೀಕ್ಷಕರಾಗಿ, ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುತ್ತಾರೆ.
ಜೂ. 20ರಂದು ಎ.ಒ.ಎಲ್.ಇ. ಕಮಿಟಿ ಬಿ ಇದರ ಅಧ್ಯಕ್ಷರಾದ ಡಾ. ರೇಣುಕಾಪ್ರಸಾದ್ ಕೆ.ವಿ ಮತ್ತು ಕಾರ್ಯದರ್ಶಿಗಳಾದ ಡಾ. ಜ್ಯೋತಿ ಆರ್. ಪ್ರಸಾದ್ ನೂತನ ಆಡಳಿತಾಧಿಕಾರಿಯಾದ ಭವಾನಿಶಂಕರ ಅಡ್ತಲೆಯವರಿಗೆ ನೇಮಕಾತಿ ಪತ್ರ ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕೆವಿಜಿ ದಂತ ಮಹಾವಿದ್ಯಾಲಯದ ಆಡಳಿತಾಧಿಕಾರಿ ಮಾಧವ ಬಿಟಿ, ಎಒಎಲ್ಇ ಯ ಪ್ರಸನ್ನ ಕಲ್ಲಾಜೆ, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಶ್ರೀಮತಿ ಸ್ವಾತಿ ಮಡಪ್ಪಾಡಿ, ಲೆಕ್ಕಪತ್ರ ವಿಭಾಗ ಮುಖ್ಯಸ್ಥರಾದ ಪದ್ಮನಾಭ ಕಾನಾವು, ಲೆಕ್ಕಪತ್ರ ಸಹಾಯಕ ಸ್ವಸ್ತಿಕ್ ಸೋಣಂಗೇರಿ ಮತ್ತಿತರರು ಉಪಸ್ಥಿತರಿದ್ದರು.



