ಸುಳ್ಯ ವೆಜ್ಝ್ ರೆಸ್ಟೋರೆಂಟ್ ನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಯೋಗ ಪ್ರತಿಭೆಗೆ ಗೌರವಾರ್ಪಣೆ

0

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ದಕ ಜಿಲ್ಲಾ ಧಾರ್ಮಿಕ ಪರಿಷತ್ತು ಸದಸ್ಯ ಲಕ್ಷ್ಮೀಶ ಗಬಲಡ್ಕ ರವರು ಯೋಗದ ವೆಝ್ಝ್ ರೆಸ್ಟೋರೆಂಟ್ ಸಿಬ್ಬಂದಿಗಳಿಗೆ ಮಾಹಿತಿ ನೀಡಿದರು.

ಅತಿಥಿಯಾಗಿ ವೆಝ್ಝ್ ರೆಸ್ಟೋರೆಂಟ್ ನ ಮುಖ್ಯ ಪಾಕತಜ್ಙ ವೆಂಕಟೇಶ ವೈಶ್ಯ,ವ್ಯವಸ್ಥಾಪಕ ರಂಜನ್ ,ನ್ಯೂಸ್ ನಾಟೌಟ್ ಮುಖ್ಯಸ್ಥ ಹೇಮಂತ್ ಸಂಪಾಜೆ, ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ,ಶ್ರೀ ಅಂಬಿಕಾ ಎಲೆಕ್ಟ್ರಾನಿಕ್ಸ್ ಹೋಮ್ ಎಪ್ಲಾಯೆನ್ಸಸ್ ಮಾಲಕ ಗಿರೀಶ್ ಕಲ್ಲಪಳ್ಳಿ, ಮೊದಲಾದವರು ಉಪಸ್ಥಿತರಿದ್ದರು. ಸುಳ್ಯದಲ್ಲಿ ಈ ಹಿಂದೆ ತಹಶಿಲ್ದಾರರಾಗಿದ್ದ ಕುಂಞಿಅಹ್ಮದ್ ರವರು ಕಾರ್ಯಕ್ರಮಕ್ಕೆ ಭೇಟಿ ಶುಭಹಾರೈಸಿದರು.


ಸ್ಟ್ರೀಟ್ ಗ್ರೋ ಸಂಸ್ಥಾಪಕ ಮನ್ವರ್ ಅಬೂಭಕ್ಕರ್ ರವರು ಸುಳ್ಯ ತಾಲೂಕು ಕಛೇರಿ ಉದ್ಯೋಗಿಗಳಾಗಿರುವ ಕೃಷ್ಣಪ್ಪ ಮತ್ತು ಪುಷ್ಪಾವತಿ ದಂಪತಿಗಳ ಪುತ್ರಿ ಅಂತರಾಷ್ಟ್ರೀಯ ಯೋಗಪಟು ಬಾಲ ಪ್ರತಿಭೆ ಹಾರ್ಧಿಕ ಕೆರೆಕ್ಕೋಡಿ ಯವರನ್ನು ಸನ್ಮಾನಿಸಿ ಗೌರವಿಸಿದರು.

ಪತ್ರಕರ್ತೆ ದಯಾಮಣಿ ಹೇಮಂತ್ ಸ್ವಾಗತಿಸಿ ಸ್ಟ್ರೀಟ್ ಗ್ರೋ ವ್ಯವಸ್ಥಾಪಕ ಕಲಂದರ್ ಎಲಿಮಲೆ ಕಾರ್ಯಕ್ರಮ ನಿರೂಪಿಸಿದರು.