ಎಡಮಂಗಲ: ರಾಜ್ಯ ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ

0

ಕಾಂಗ್ರೆಸ್ ನೇತೃತ್ವದ ಕರ್ನಾಟಕ ರಾಜ್ಯ ಸರಕಾರ ಜನ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ಅರೋಪಿಸಿ ಇಂದು ಎಡಮಂಗಲ ಗ್ರಾ.ಪಂ. ಮುಂಭಾಗ ಬಿಜೆಪಿ ನಾಯಕರಿಂದ ಪ್ರತಿಭಟನೆ ನಡೆಯಿತು.

ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷ ರಾಮಣ್ಣ ಜಾಲ್ತಾರು, ಗ್ರಾ.ಪಂ. ಸದಸ್ಯರು, ಬಿಜೆಪಿ ಶಕ್ತಿ ಕೇಂದ್ರದ ಕಾರ್ಯದರ್ಶಿ ಜಯಪ್ರಕಾಶ್ ಲೆಕ್ಕಿಸಿರಿಮಜಲು, ಎಡಮಂಗಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಮಾಲೆಂಗ್ರಿ, ಸುಳ್ಯ ಮಂಡಲದ ಉಪಾಧ್ಯಕ್ಷೆ ಶ್ರೀಮತಿ ಶುಭಾಧ ಎಸ್ ರೈ ಹಾಗೂ ಬಿ ಜೆ ಪಿ ಕಾರ್ಯ ಕರ್ತರು ಬಾಗವಹಿಸಿದರು.

ಇಂದು ತಾಲೂಕಿನ 25 ಗ್ರಾಮ ಪಂಚಾಯತ್ ಎದುರು ಹಾಗೂ ನ.ಪಂ.ಮುAಭಾಗ ಪ್ರತಿಭಟನೆ ನಡೆಯಲಿದೆ. ಗ್ರಾ.ಪಂ. ಹಾಗೂ ನ.ಪಂ.ನ ಕೆಲಸ ಕಾರ್ಯಗಳು ಮಾಮೂಲಿನಂತೆ ನಡೆಯುತ್ತಿದೆ. ವರದಿ:ಎಎಸ್‌ಎಸ್ ಅಲೆಕ್ಕಾಡಿ