ಕಾಂಗ್ರೆಸ್ ಆಡಳಿತ ರಾಜ್ಯ ಸರಕಾರದ ಜನವಿರೋಧಿ ನೀತಿ ಖಂಡಿಸಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಪಂಜ ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನೆ ಜೂ.23 ರಂದು ನಡೆಯಿತು. ಮನ್ ಕೀ ಬಾತ್ ಪ್ರಮುಖ್ ನಾರಾಯಣ ಕೃಷ್ಣನಗರ ಮತ್ತು ಐವತ್ತೊಕ್ಲು ಶಕ್ತಿ ಕೇಂದ್ರದ ಪ್ರಮುಖ್ ಲೋಕೇಶ್ ಬರೆಮೇಲು ರವರು ಕಾಂಗ್ರೆಸ್ ಆಡಳಿತ ಸರಕಾರದಿಂದ ಜನ ವಿರೋಧಿ ನೀತಿ ಕುರಿತು ವಿವರಿಸಿದರು. ಬಳಿಕ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಂತ್ ಯು ಬಿ ರವರಿಗೆ ಮನವಿ ಸಲ್ಲಿಸಿದರು.















ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ , ಜಳಕದಹೊಳೆ,ಶಿವರಾಮಯ್ಯ ಕರ್ಮಾಜೆ, ಮಂಡಲ ಸಮಿತಿ ಸದಸ್ಯ ಲಿಗೋಧರ ಆಚಾರ್ಯ, ಕೂತ್ಕುಂಜ ಶಕ್ತಿ ಕೇಂದ್ರದ ಪ್ರಮುಖ್ ಶರತ್ ಕುದ್ವ, ಯುವ ಮೋರ್ಚಾ ಸದಸ್ಯ ಕಿರಣ್ ನೆಕ್ಕಿಲ, ಐವತ್ತೊಕ್ಲು 1 ನೇ ವಾರ್ಡ್ ಬೂತ್ ಅಧ್ಯಕ್ಷ ಗೌತಮ್ ಬೊಳ್ಳಾಜೆ, ಪ್ರ.ಕಾರ್ಯದರ್ಶಿ ವಾಚಣ್ಣ ಕೆರೆಮೂಲೆ,ಐವತ್ತೊಕ್ಲು 2ನೇ ವಾರ್ಡ್ ಬೂತ್ ಅಧ್ಯಕ್ಷ ದಯಾನಂದ ಮೇಲ್ಮನೆ, ಐವತ್ತೊಕ್ಲು 3 ನೇ ವಾರ್ಡ್ ಬೂತ್ ಅಧ್ಯಕ್ಷ ಚಿನ್ನಪ್ಪ ಗೌಡ ಚೊಟ್ಟೆಮಜಲು, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್ಲು,ಸದಸ್ಯರಾದ ಜಗದೀಶ್ ಪುರಿಯ,ಲಿಖಿತ್ ಪಲ್ಲೋಡಿ, ಶ್ರೀಮತಿ ವೀಣಾ, ಶ್ರೀಮತಿ ನೇತ್ರಾವತಿ ಕಲ್ಲಾಜೆ, ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ತಿಮ್ಮಪ್ಪ ಗೌಡ ಕೂತ್ಕುಂಜ,ಎ ಪಿ ಎಂ ಸಿ ಮಾಜಿ ನಿರ್ದೇಶಕ ಮೋನಪ್ಪ ಗೌಡ ಬೊಳ್ಳಾಜೆ, ನೇಮಿರಾಜ ತೋಟ , ದಾಮೋದರ ಪಲ್ಲೋಡಿ, ಪದ್ಮನಾಭ ಗೌಡ ಬೊಳ್ಳಾಜೆ,ಜಗತ್ ಸಿಂಹ, ಲೋಕಯ್ಯ ಕೋಟ್ಯಡ್ಕ, ನಾರಾಯಣ ಶಿರಾಜೆ ಮೊದಲಾದವರು ಉಪಸ್ಥಿತರಿದ್ದರು.










