ನ.ಪಂ. ಎದುರು ಬಿಜೆಪಿ ಪ್ರತಿಭಟನೆಗೆ ಕಾಂಗ್ರೆಸ್ ಮುಖಂಡ ಎಂ.ವೆಂಕಪ್ಪ ಗೌಡ ತಿರುಗೇಟು
ನಗರ ಪಂಚಾಯತ್ ನಲ್ಲಿ ಅಧಿಕಾರದಲ್ಲಿರುವ ಬಿಜೆಪಿಯವರು ನಗರ ಪಂಚಾಯತ್ ಮುಂಭಾಗ ಇಂದು ಪ್ರತಿಭಟನೆ ನಡೆಸಿರುವುದು ಅವರ ನಾಚಿಗೇಡಿತನವಾಗಿದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ನ.ಪಂ. ಸದಸ್ಯ ಎಂ.ವೆಂಕಪ್ಪ ಗೌಡ ಪ್ರತಿಕ್ರಿಯೆ ನೀಡಿದ್ದಾರೆ.















ನಗರ ಪಂಚಾಯತ್ ನಲ್ಲಿ ಬಿಜೆಪಿಯವರೇ ಆಡಳಿತ ನಡೆಸುತ್ತಿರುವುದು. ಅಧಿಕಾರದಲ್ಲಿ ಇರುವ ಬಿಜೆಪಿಗರಿಗೆ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ ಎಂದಾದರೆ ಅದಕ್ಕೆ ಪ್ರತಿಭಟನೆ ದಾರಿ ಅಲ್ಲ. ಬದಲಿಗೆ ಅಧಿಕಾರ ಬಿಟ್ಟು ಹೊರ ನಡೆಯುವುದೊಂದೇ ದಾರಿ ಎಂದು ಅವರು ಬಿಜೆಪಿ ಪ್ರತಿಭಟನೆ ಗೆ ತಿರುಗೇಟು ನೀಡಿದ್ದಾರೆ.










