ಐವರ್ನಾಡು ಗ್ರಾಮ ಪಂಚಾಯತ್ ಎದುರು ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿ ಖಂಡಿಸಿ ಬಿಜೆಪಿ ಪ್ರತಿಭಟನೆ

0

ಐವರ್ನಾಡು ಗ್ರಾಮ ಪಂಚಾಯತ್ ಎದುರು ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಯು ಜೂ.23 ರಂದು ನಡೆಯಿತು.
ಬಿಜೆಪಿ ಮಹಾಶಕ್ತಿ ಕೇಂದ್ರದ ಕಿಶನ್ ಜಬಳೆಯವರು ಸ್ವಾಗತಿಸಿ ರಾಜ್ಯ ಸರಕಾರದ ಜನವಿರೋಧಿ ನೀತಿಯನ್ನು ಖಂಡಿಸಿದರು.
ಬಳಿಕ ರಾಜ್ಯ ಸರಕಾರಕ್ಕೆ ಧಿಕ್ಕಾರ,ಘೋಷಣೆ ಹಾಕಿದರು.


ಮೋಹನ ಬೋಳುಗುಡ್ಡೆಯವರು ಮಾತನಾಡಿ ಇಂದು ರಾಜ್ಯ ಸರಕಾರದಿಂದ ಅಭಿವೃದ್ಧಿಯಲ್ಲಿ ಹಿನ್ನೆಡೆಯಾಗಿದೆ.ಯಾವುದೇ ಅನುದಾನ ಇಲ್ಲ.ರಸ್ತೆ ನರಕಯಾತನೆಯಾಗಿದೆ.ಜನರಿಗೆ ಓಡಾಡಲು ಕಷ್ಟಕರವಾಗಿದೆ.
ಗ್ಯಾರಂಟಿ ಯೋಜನೆಗಳಿಂದ ಜನರಿಗೆ ತೊಂದರೆಯಾಗಿದೆ.
ಬಡವರಿಗೆ ಮತ್ತಷ್ಟು ತೊಂದರೆಯಾಗಿದೆ.ವಿದ್ಯುತ್ ಬಿಲ್ಲು ಜಾಸ್ತಿ ಬರುತ್ತಿದೆ.ನಿಮ್ಮ ಯಾವುದೇ ಗ್ಯಾರಂಟಿ ಯೋಜನೆಗಳು ಬೇಡ,ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಎಂದು ಹೇಳಿ ಸರಕಾರದ ನಡೆಯನ್ನು ಖಂಡಿಸಿದರು.
ಸಹಕಾರಿ ಸಂಘದ ನಿರ್ದೇಶಕ ಶ್ರೀನಿವಾಸ ಮಡ್ತಿಲರವರು ಮಾತನಾಡಿ ರಾಜ್ಯ ಸರಕಾರದಿಂದ ಜನರಿಗೆ ತೊಂದರೆಯಾಗುತ್ತಿರುವುದಾಗಿ ಹೇಳಿ ಸರಕಾರದ ಗ್ಯಾರಂಟಿ ಯೋಜನೆಗಳನ್ನು ಖಂಡಿಸಿದರು.
ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನವೀನ್ ಕುಮಾರ್ ಸಾರಕರೆಯವರು ಮಾತನಾಡಿ ಸರಕಾರದಿಂದ ಬಡವರಿಗೆ ತೊಂದರೆಯಾಗಿದ್ದು ಜನವಿರೋಧಿ ನೀತಿಯ ಬಗ್ಗೆ ಖಂಡಿಸಿದರು.
ಬಳಿಕ ಗ್ರಾಮ ಪಂಚಾಯತ್ ಪಿಡಿಒ ಮುಖಾಂತರ ಮುಖ್ಯಮಂತ್ರಿ ,ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಗಣೇಶ ಕೊಚ್ಚಿ,ದೇವಿದಾಸ ಕತ್ಲಡ್ಕ , ಸರಸ್ವತಿ ಕೈವಲ್ತಡ್ಕ,ಜಗದೀಶ ಕೋಲ್ಚಾರ್,ಬಾಲಚಂದ್ರ ಪಲ್ಲತ್ತಡ್ಕ, ರೇವತಿ ಬೋಳುಗುಡ್ಡೆ,ಅರುಣ್ ಗುತ್ತಿಗಾರುಮೂಲೆ,ಚೇತನ್ ಬೋಳುಗುಡ್ಡೆ,ಜನಾರ್ಧನ ನನ್ಯಡ್ಕ,ಅನಿಲ್ ದೇರಾಜೆ,ರಕ್ಷಿತ್ ಸಾರಕೂಟೇಲು,ನಿಖಿಲ್ ಮಡ್ತಿಲ,ಗಣೇಶ ಬಜಂತಡ್ಕ,ರೇಣುಕಾಪ್ರಸಾದ್ ಚಾಕೋಟೆ,ಪ್ರಸಾದ್ ದೇವರಕಾನ,ಗಣೇಶ ದೇವರಕಾನ,ಸತ್ಯನಾರಾಯಣ ಅಚ್ರಪ್ಪಾಡಿ,ಭವಾನಿಶಂಕರ ಪೂಜಾರಿಮನೆ,ಗ್ರಾ.ಪಂ.ಸದಸ್ಯೆ ನಳಿನಿ ಕೋಡ್ತೀಲು ಹಾಗೂ ಬಿಜೆಪಿ ಶಕ್ತಿ ಕೇಂದ್ರದ ಸದಸ್ಯರು,ಕಾರ್ಯಕರ್ತರು ಉಪಸ್ಥಿತರಿದ್ದರು
ಐವರ್ನಾಡು ಬಿಜೆಪಿ.ಶಕ್ತಿ ಕೇಂದ್ರದ ಸಂಚಾಲಕ ನಂದಕುಮಾರ್ ಬಾರೆತ್ತಡ್ಕ ವಂದಿಸಿದರು.