ಬಿಜೆಪಿ ಅಧಿಕಾರದಲ್ಲಿದ್ದಾಗ ಸುಳ್ಯ ಕ್ಷೇತ್ರದ ಸಮಗ್ರ ಅಭಿವೃದ್ಧಿಯಾಗಿದೆ

0

ಕಾಂಗ್ರೆಸ್ ಶಾಸಕರುಗಳೇ ಅನುದಾನ ಬರುತ್ತಿಲ್ಲವೆಂದು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದರೆ ಆ ಬಗ್ಗೆ ಏನಂತೀರಿ?: ಕಾಂಗ್ರೆಸ್ ಮುಖಂಡರಿಗೆ ವೆಂಕಟ್ ವಳಲಂಬೆ ಪ್ರಶ್ನೆ

ಸುಳ್ಯ:ಗ್ರಾಮ ಪಂಚಾಯತ್ ಮಟ್ಟದಲ್ಲಿ ಸರ್ಕಾರದ ಯಾವುದೇ ಅಭಿವೃದ್ಧಿ ಕಾರ್ಯಗಳು ಕಾಂಗ್ರೇಸ್ ಸರ್ಕಾರ ಬಂದ ನಂತರ ನಡೆಯುತ್ತಿಲ್ಲ, ಜನಸಾಮಾನ್ಯರಿಗೆ ಆಕ್ರೋಶಿತರಾಗಿದ್ದಾರೆ. ಆ ಹಿನ್ನೆಲೆಯಲ್ಲಿ ಗ್ರಾಮ ಮಟ್ಟದಲ್ಲಿ ಪ್ರತಿಭಟನೆ ನಡೆಸಿzವೆ.ಯಾವುದೇ ಚುನಾವಣೆ ದೃಷ್ಟಿಯಿಂದ ಅಲ್ಲವೆಂದು ವೆಂಕಟ್ ವಳಲಂಬೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಕಾಂಗ್ರೇಸ್ ಮುಖಂಡರು ಸುಳ್ಯ ಕ್ಷೇತ್ರವನ್ನು ಬಿಜೆಪಿ ಅಭಿವೃದ್ಧಿ ನಡೆಸಿಲ್ಲವೆಂದು ಆರೋಪ ಮಾಡಿದ್ದಾರೆ ಸುಳ್ಯ ಕ್ಷೇತ್ರ ಅಭಿವೃದ್ಧಿಯಲ್ಲಿ ಯಾವತ್ತೂ ಹಿಂದುಳಿದಿಲ್ಲ,ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಪ್ರತಿ ಗ್ರಾಮದಲ್ಲಿ ರಸ್ತೆ, ಕುಡಿಯುವ ನೀರು,ಕಾಲು ಸೇತುವೆ ನಿರ್ಮಾಣವಾಗಿದೆ.ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ರೈತರ ಖಾತೆಗೆ ಹಣ,ಕೃಷಿಕರ ಪಂಪ್ ಸೆಟ್ ಗೆ ಉಚಿತ ವಿದ್ಯುತ್ , ಗರಿಭ್ ಕಲ್ಯಾಣ ಅಡಿಯಲ್ಲಿ ೫ ಕೆಜಿ ಅಕ್ಕಿ, ನಗರ ಅಭಿವೃದ್ಧಿ ಗೆ ನಗರೋತ್ಥಾನ ಅಡಿಯಲ್ಲಿ ವಿಶೇಷ ಅನುದಾನ ನೀಡಲಾಗಿದೆ. ಸುಳ್ಯಕ್ಕೆ ಸುಸಜ್ಜಿತ ಬಸ್ ನಿಲ್ದಾಣ, ಕೆ ಎಸ್ ಆರ್ ಟಿ ಸಿ ಡೀಪೋ, ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳಿಗೆ ಸುಳ್ಯ, ಬೆಳಂದೂರು ಭಾಗದಲ್ಲಿ ಪದವಿ ಕಾಲೇಜ್ , ಮಿನಿ ವಿಧಾನ ಸೌಧ ನಿರ್ಮಾಣ, ಸುಳ್ಯ ನಗರಕ್ಕೆ ಕುಡಿಯುವ ನೀರಿನ ದೃಷ್ಟಿಯಿಂದ ಅಣೆಕಟ್ಟು ನಿರ್ಮಾಣ, ಪ್ರತಿ ಧಾರ್ಮಿಕ ಕೇಂದ್ರ ಗಳಿಗೆ ೨೫ ಲಕ್ಷದಿಂದ ಒಂದು ಕೋಟಿ ವರೆಗೆ ನಮ್ಮ ಸರ್ಕಾರ ಅವಧಿಯಲ್ಲಿ ನೀಡಿರುತ್ತದೆ ಆದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ಶಾಸಕರ ಕ್ಷೇತ್ರ ಬೇಡ ನಿಮ್ಮದೇ ಪಕ್ಷದ ಶಾಸಕರು ಗಳೇ ಅನುದಾನ ಬರುತ್ತಿಲ್ಲ,ರಾಜೀನಾಮೆ ನೀಡಲು ಸಿದ್ದವೆಂದು ಹೇಳಿಕೆ ನೀಡುತ್ತಿದ್ದಾರೆ. ಅದಕ್ಕಿಂತ ದೊಡ್ಡ ಉದಾಹರಣೆ ಬೇಕಾ? ಪ್ರಶ್ನಿಸಿದ್ದಾರೆ.
ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಹಣ ಬಿಡುಗಡೆ ಮಾಡಲು ಈ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಸರ್ಕಾರದ ಅಸಮರ್ಪಕ ನೀತಿಯಿಂದ ಕರಾವಳಿ ಜಿಲ್ಲೆಗಳಲ್ಲಿ ಸಾಮಾನ್ಯ ಜನರಿಗೆ ಮನೆ ನಿರ್ಮಿಸಲು ಕೆಂಪು ಕಲ್ಲು, ಮರಳು ದೊರಕುತ್ತಿಲ್ಲ.ಸಂಧ್ಯಾ ಸುರಕ್ಷಾ ಯೋಜನೆ ಹಣ ವಿಳಂಬ,ಭಾಗ್ಯಲಕ್ಷ್ಮಿ ಯಂತ ಯೋಜನೆ ನಿಲ್ಲಿಸಲು ಯತ್ನಿಸುತ್ತಿರುವ ಈ ಸರ್ಕಾರದ ವಿರುದ್ಧ ಜನಸಾಮಾನ್ಯರ ಹಿತದೃಷ್ಟಿಯಿಂದ ಬೀದಿಯಲ್ಲಿ ನಿಂತು ಪ್ರತಿಭಟನೆ ನಡೆಸಲು ನಮ್ಮ ಪಕ್ಷ ಬದ್ಧವಾಗಿದೆಯೆಂದು ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.