ತಪ್ಪಿದ ಅನಾಹುತ, ಅಪಾಯದಿಂದ ಪಾರು
ಗೂನಡ್ಕ ಮಸೀದಿಯ ಬಳಿ ಹೆದ್ದಾರಿ ಪಕ್ಕದಲ್ಲಿ ನಿಲ್ಲಿಸಿದ್ದ ಕಾರಿನ ಹಿಂಭಾಗಕ್ಕೆ ರಸ್ತೆ ಬದಿಯಲ್ಲಿದ್ದ ಸಾಗುವಾನಿ ಮರ ತುಂಡಾಗಿ ಬಿದ್ದು ಕಾರಿಗೆ ಅಲ್ಪ ಸ್ವಲ್ಪ ಜಖಂ ಸಂಭವಿಸಿದ ಘಟನೆ ಬೆಳಿಗ್ಗೆ ಜೂ 25 ರಂದು ನಡೆದಿದೆ.















ಗೂನಡ್ಕ ನಿವಾಸಿ ವಿನಯ ಎಂಬವರು ತಮ್ಮ ಮಾರುತಿ 800 ಕಾರಿನಲ್ಲಿ ಗೂನಡ್ಕ ಅಂಗಡಿ ಬಳಿ ಬಂದಿದ್ದು, ರಸ್ತೆ ಬಳಿ ಕಾರು ನಿಲ್ಲಿಸಿ ಪಕ್ಕದ ಅಂಗಡಿಗೆ ಹೋಗಿದ್ದ ವೇಳೆ ಈ ವೇಳೆ ಬಂದ ಗಾಳಿ ಮಳೆಗೆ ಸಾಗುವಾನಿ ಮರ ಮುರಿದು ಬಿದ್ದಿದೆ ಎನ್ನಲಾಗಿದೆ.
ಈ ಸಂದರ್ಭ ಕಾರಿನ ಹಿಭಾಂಗಕ್ಕೆ ಗೆಲ್ಲುಗಳು ತಾಗಿ ಅಲ್ಪ ಸ್ವಲ್ಪ ಜಖಂ ಆಗಿದ್ದು ಕಾರಿನ ಬಳಿ ಯಾರೂ ಇಲ್ಲದೇ ಇದ್ದ ಕಾರಣ ಹೆಚ್ಚಿನ ಅಪಾಯ ತಪ್ಪಿದೆ.
ಇದೇ ಸ್ಥಳದಲ್ಲಿ ಒಂದು ಗಂಟೆ ಮೊದಲು ಇನ್ನೊಂದು ಮರದ ಕೊಂಬೆ ಮುರಿದು ಬಿದ್ದ ಘಟನೆಯೂ ನಡೆದಿದೆ ಎನ್ನಲಾಗಿದೆ.










