ಗುರುವ ಮುಗೇರ ಪಳ್ಳಿಮಜಲು ನಿಧನ

0

ಬೆಳ್ಳಾರೆ ಗ್ರಾಮದ ಪಳ್ಳಿಮಜಲು ಗುರುವ ಮುಗೇರರವರು ಜೂ.23 ರಂದು ರಾತ್ರಿ ಹೃದಯಾಘಾತದಿಂದ ನಿಧನರಾದರು.
ಅವರಿಗೆ 43 ವರ್ಷ ಪ್ರಾಯವಾಗಿತ್ತು.


ಮನೆಯಲ್ಲಿ ರಾತ್ರಿ ಎದೆನೋವು ಕಾಣಿಸಿಕೊಂಡ ಇವರನ್ನು ಕೂಡಲೇ ಆಂಬ್ಯುಲೆನ್ಸ್ ನಲ್ಲಿ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು.
ಆಸ್ಪತ್ರೆಯಲ್ಲಿ ಇವರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿದರೆಂದು ತಿಳಿದುಬಂದಿದೆ.


ಕಿಡ್ನಿ ಸಮಸ್ಯೆಯಿದ್ದ ಇವರು ಜೂ.21 ರಂದು ಸುಳ್ಯದಲ್ಲಿ ಡಯಾಲಿಸಿಸ್ ಮಾಡಿಸಿಕೊಂಡಿದ್ದರು.


ಮೃತರು ಪತ್ನಿ ಬೆಳ್ಳಾರೆ ಕೆಪಿಎಸ್ ನಲ್ಲಿ ಅಡುಗೆ ಸಹಾಯಕಿಯಾಗಿದ್ದ ಶ್ರೀಮತಿ ಸುಶೀಲ,ಪುತ್ರರಾದ ತೇಜೇಶ್,ಶೈಲೇಶ್ ಪುತ್ರಿ ವಿದ್ಯಾ ಹಾಗೂ ಕುಟುಂಬಸ್ಥರು ,ಬಂಧುಮಿತ್ರರನ್ನು ಅಗಲಿದ್ದಾರೆ.