ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸೂಡ) ವತಿಯಿಂದ ನಗರ ಮಹಾಯೋಜನೆ (ಮಾಸ್ಟರ್ ಪ್ಲಾನ್) ಅನುಷ್ಠಾನ ಕುರಿತು ನಗರ ಪಂಚಾಯತ್ ಸದಸ್ಯರು ಗಳು, ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ ಜೂ 25 ರಂದು ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ರವರ ಅಧ್ಯಕ್ಷತೆಯಲ್ಲಿ ನಗರ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಸುಳ್ಯ ನಗರ ಪ್ರಾಧಿಕಾರದ ಅಧ್ಯಕ್ಷ ಕೆ ಎಂ ಮುಸ್ತಫ ಮಹಾ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಸುಳ್ಯದಲ್ಲಿರುವ ತಾತ್ಕಾಲಿಕ ಮಹಾ ಯೋಜನೆಯು ಸುಳ್ಯದ ಭೌಗೋಳಿಕ ಹಿನ್ನೆಲೆಗೆ ಸರಿ ಹೊಂದಿರವುದಿಲ್ಲ. ಆದ್ದರಿಂದ ಅದನ್ನು ಅಲ್ಪ ಮಟ್ಟಿಗೆ ಸರಿ ಪಡಿಸುವ ಕೆಲಸ ಕಾರ್ಯಗಳು ಆಗ ಬೇಕಾಗಿದೆ.ನಗರ ವ್ಯಾಪ್ತಿಯಲ್ಲಿ ಕನ್ವರ್ಷನ್ ವಿನ್ಯಾಸ ಅನುಮೋದನೆಗೆ ರಸ್ತೆಗಳ ಗುರುತಿಸುವಿಕೆ,ಕಡತಗಳ ಐ ಡಿ ನಂಬರ, ಸೊತ್ತಿನ ಸಂಖ್ಯೆಗಳು ಸರಿಯಾಗಿ ಇಲ್ಲದೇ ಇರುವುದರಿಂದ ನಗರ ವ್ಯಾಪ್ತಿಯ ಎಲ್ಲಾ ರಸ್ತೆ ಗಳನ್ನು ಪುರಸಭಾ ಕಲಂ 177 ರಂತೆ ಆದಿ ನಿಯಮ ಪ್ರಕಾರ ಸಾರ್ವಜನಿಕ ರಸ್ತೆ ಎಂದು ಘೋಷಿಸಲು ಕ್ರಮ ಕೈಗೊಳ್ಳಬೇಕಾಗುತ್ತದೆ.
ಆದ್ದರಿಂದ ಹಾಲಿ ರಸ್ತೆಗಳನ್ನು ಅಗಲ ಮತ್ತು ಐ ಡಿ ನಂಬರ ನೀಡಿ ಸಾರ್ವಜನಿಕರ ಆಕ್ಷೇಪಣೆಗೆ ಅರ್ಜಿ ನೀಡಲು 30 ದಿನಗಳ ಕಾಲಾವಕಾಶ ನೀಡಿ ಹಾಲಿ ಇರುವ ಎಲ್ಲಾ ರಸ್ತೆ ಗಳನ್ನು ಸಾರ್ವಜನಿಕ ರಸ್ತೆ ಎಂದು ಘೋಷಿಸಲಾಗುವುದು. ಈ ಎಲ್ಲಾ ಕಾರ್ಯಗಳಿಗೆ ಸದಸ್ಯರುಗಳು ಸಹಮತದ ಬೇಕಾಗುತ್ತೆ ಎಂದು ತಿಳಿಸಿದರು.
ಇದಕ್ಕೆ ಸಭೆಯಲ್ಲಿದ್ದ ಸದಸ್ಯರುಗಳು ಸಹ ಮತವನ್ನು ವ್ಯಕ್ತ ಪಡಿಸಿ
ಈ ಬಗ್ಗೆ ಮುಂದಿನ ನಗರ ಪಂಚಾಯತ್ ಸಭೆಯಲ್ಲಿ ಈ ವಿಷಯವನ್ನು ಮಂಡಿಸಿ ಸರ್ವ ಸದಸ್ಯರ ತೀರ್ಮಾನ ಪಡೆಯುವ ಬಗ್ಗೆ ಚರ್ಚೆ ನಡೆಯಿತು.
















ಆಶ್ರಯ ಕಾಲೋನಿ ಮನೆಗಳು,ಗುಂಪು ಮನೆಗಳು ಇರುವ ಹಿನ್ನೆಲೆಯಲ್ಲಿ 12,9,6, ಮೀಟರ್ ಗೆ ವಿಸ್ತೀರ್ಣವನ್ನು ಇಳಿಸಿದಲ್ಲಿ ಸುಳ್ಯದ ಮಾಸ್ಟರ್ ಪ್ಲಾನ್ ಗೆ ಸಮಗ್ರವಾಗಿ ಉತ್ತಮ ಫಲಿತಾಂಶ ವಾಗಲಿದ್ದು ಇದು ಎಲ್ಲರಿಗೂ ಅನುಕೂಲ ವಾಗಲಿದೆ ಎಂದು ಮುಸ್ತಫಾ ರವರು ಸಭೆಗೆ ಮಾಹಿತಿ ನೀಡಿದರು.
ಈ ಭಾಗದ ಅಭಿವೃದ್ಧಿ ನಡೆಸುವ ನಿಟ್ಟಿನಲ್ಲಿ ಕರಾವಳಿ ಭಾಗಕ್ಕೆ ಪ್ರತ್ಯೇಕ ನಿಯಮಾವಳಿ ಮಾಡಿ ಕೊಡ ಬೇಕೆಂದು ದ.ಕ ಹಾಗೂ ಉಡುಪಿ ಪ್ರಾಧಿಕಾರದ ಒಕ್ಕೂಟದ ವತಿಯಿಂದ ಸರಕಾರಕ್ಕೆ ಈಗಾಗಲೇ ಮನವಿಯನ್ನು ಕೂಡ ಸಲ್ಲಿಸಲಾಗಿದೆ ಎಂದು ಮುಸ್ತಫಾರವರು ಹೇಳಿದರು.
ಮುಂದೆ ಕಾನೂನಿನ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಮಾಹಿತಿ ಪಡೆದು ಯೋಜನೆಗಳ ಬಗ್ಗೆ ಚರ್ಚೆ ಮಾಡೋಣ ಎಂದರು.
ಅಲ್ಲದೆ ಮುಂದಿನ ದಿನಗಳಲ್ಲಿ ಎಲ್ಲಾ ವಾರ್ಡ್ ಗಳಲ್ಲಿ ಮಾಸ್ಟರ್ ಪ್ಲಾನ್ ಬಗ್ಗೆ ಆಯಾ ವಾರ್ಡ್ ಸದಸ್ಯರುಗಳೊಂದಿಗೆ ಸಮಾಲೋಚನೆ ಸಭೆ ಸೇರಿ ಅಭಿಪ್ರಾಯಗಳನ್ನು ಸಂಗ್ರಹಣೆ ಮಾಡುವ ಎಂದು ಅವರು ಹೇಳಿದರು.
ವೇದಿಕೆಯಲ್ಲಿ ನಗರ ಪಂಚಾಯತ್ ಉಪಾಧ್ಯಕ್ಷ ಬುದ್ಧ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್, ನಗರ ಪಂಚಾಯತ್ ಮುಖ್ಯ ಅಧಿಕಾರಿ ಸುಧಾಕರ್, ಸುಳ್ಯ ಸೂಡ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗುರು ಪ್ರಸಾದ್ ಉಪಸ್ಥಿತರಿದ್ದರು.
ಸಭೆಯಲ್ಲಿ ನಗರ ಪಂಚಾಯತ್ ಸದಸ್ಯರುಗಳಾದ ಎಂ ವೆಂಕಪ್ಪಗೌಡ,ಬಾಲಕೃಷ್ಣ ಭಟ್ ಕೊಡಂಕೇರಿ, ಧೀರಾ ಕ್ರಾಸ್ತ, ಕೆ ಎಸ್ ಉಮ್ಮರ್, ರಿಯಾಜ್ ಕಟ್ಟೆಕ್ಕಾರ್ಸ್ ಶಿಲ್ಪ ಸುದೇವ್,ಬಾಲಕೃಷ್ಣ ರೈ, ಸರೋಜಿನಿ ಪೆಲ್ತಡ್ಕ, ಶುಶಿಲಾ ಜಿನ್ನಪ್ಪ,ಸುಧಾಕರ್ ಕುರುಂಜಿ ಗುಡ್ಡೆ,ಸುಳ್ಯ ನಗರ ಯೋಜಕರಾದ ಫೈರೋಜ್ ಮತ್ತಿತರರು ಉಪಸ್ಥಿತರಿದ್ದರು.










