ಕೋಡ್ಲ ಗಣಪತಿ ಭಟ್ ರವರು ಉಚಿತವಾಗಿ ಯಕ್ಷಗಾನ ನಾಟ್ಯ ತರಗತಿಯನ್ನು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಯ ಇಲ್ಲಿ ನಡೆಸುವವರಿದ್ದು ಅದರ ಉದ್ಘಾಟನೆಯನ್ನು ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಮಮತಾ ಉದ್ಘಾಟಿಸಿದರು.















ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ರವಿರಾಜ್ ಅಡ್ಕಾರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಯಕ್ಷಗಾನ ನಾಟ್ಯ ಗುರುಗಳಾದ ಕೋಡ್ಲ ಗಣಪತಿ ಭಟ್ ಶಾಲಾ ಮುಖ್ಯ ಶಿಕ್ಷಕಿ ಸುನಂದ ಶೆಟ್ಟಿ, ಶಿಕ್ಷಕರಾದ ಶೀಲಾವತಿ ಬಿ ಎ ಪ್ರೇಮಾವತಿ ಸಿ ಗೀತಾಕುಮಾರಿ ಎಸ್ ಡಿ ಎಂ ಸಿ ಉಪಾಧ್ಯಕ್ಷೆ ವಿಂದ್ಯಾಶ್ರೀ ಉಪಸ್ಥಿತರಿದ್ದರು. ಯಕ್ಷಗಾನ ಕಲಿಕೆಯಿಂದ ಉಂಟಾಗುವ ಪ್ರಯೋಜನಗಳನ್ನು ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಯಕ್ಷಗುರುಗಳಾದ ಕೋಡ್ಲ ಗಣಪತಿ ಭಟ್ ತಿಳಿಸಿದರು. ಬಳಿಕ ವಿದ್ಯಾರ್ಥಿಗಳಿಗೆ ಹೆಜ್ಜೆಗಳನ್ನು ಕಲಿಸುವ ಮೂಲಕ ತರಗತಿಗೆ ಚಾಲನೆಯನ್ನು ನೀಡಿದರು.ಶಿಕ್ಷಕರಾದ ಮಲ್ಲಿಕಾ ಹಾಗೂ ಕೀರ್ತಿ ಸಹಕರಿಸಿದರು.










