ಮುರುಳ್ಯ ಶಾಂತಿ ನಗರ ಶಾಲೆಗೆ ಸಮವಸ್ತ್ರ ಕೊಡುಗೆ

0


ಮುರುಳ್ಯ ಶಾಂತಿನಗರ
ಸ.ಹಿ.ಪ್ರಾ. ಶಾಲೆಗೆ ಮುರುಳ್ಯ ಎಣ್ಮೂರು ಪ್ರಾ.ಕೃ.ಪ.ಸ. ಸಂಘದ ನಿವೃತ್ತ ಸಹಾಯಕ ವ್ಯವಸ್ಥಾಪಕರಾದ ಮಾಯಿಲಪ್ಪ ಗೌಡ ಪಿಲಂಕುಜೆಯವರು ಜೂ. 25ರಂದು ಸಮವಸ್ತ್ರ ನೀಡಿದರು.


ಎಲ್.ಕೆ.ಜಿ, ಯು.ಕೆ.ಜಿ ಮತ್ತು ಪ್ರಾಥಮಿಕ ಶಾಲಾ 7ನೇ ತರಗತಿಯವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಗೌರವ ಶಿಕ್ಷಕಿಯರಿಗೆ, ಬಿಸಿಯೂಟ ಸಿಬ್ಬಂದಿಯವರಿಗೆ ಕಲರ್ ಸಮವಸ್ತ್ರವನ್ನು ಕೊಡುಗೆಯಾಗಿ ನೀಡಿದರು. ಮುಖ್ಯ ಶಿಕ್ಷಕಿ ಶ್ರೀಮತಿ ಸೀತಾ ವಿ ಯವರು ಶಾಲೆಯ ಪರವಾಗಿ ಮಾಯಿಲಪ್ಪ ಗೌಡ ಪಿಲಂಕುಜೆಯವರನ್ನು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ನಿಂತಿಕಲ್ಲು ನ್ಯೂ ಪೋಲೋ ಪ್ಲಸ್ ಮಾಲಕ ಧ್ರುವ ಕುಮಾರ್ ಕೇರ್ಪಡ, ಎಸ್.ಡಿ.ಎಂ.ಸಿ. ಅಧ್ಯಕ್ಷ
ದಿನೇಶ್ ನಡುಬೈಲು, ಉಪಾಧ್ಯಕ್ಷೆ ಶ್ರೀಮತಿ ಬೇಬಿ ಮತ್ತು ಎಸ್.ಡಿ.ಎಂ.ಸಿ. ಸದಸ್ಯರು, ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.