“ಸುದ್ದಿ ವರದಿ ಫಲಶ್ರುತಿ” ಕೊಯನಾಡು ಬಸ್ ತಂಗುದಾಣ ಛಾವಣಿಗೆ ನೂತನ ಶೀಟ್ ಅಳವಡಿಸಿದ ಸಂಪಾಜೆ ಗ್ರಾಂ.ಪಂ.

0

ಭಾರೀ ಗಾಳಿ ಮಳೆಗೆ ಕೊಡಗು ಸಂಪಾಜೆಯ ಕೊಯನಾಡು ಸಾರ್ವಜನಿಕ ಬಸ್ ತಂಗುದಾಣ ಮೇಲ್ಛಾವಣಿಯ ಶೀಟ್ ಹಾರಿ ಹೋಗಿ ಶೀಟ್ ಗಳು ಹಾನಿಯಾದ ಹಿನ್ನಲೆ ಸುದ್ದಿ ವೆಬ್ಸೈಟ್ ವರದಿ ಹಿನ್ನಲೆ ಕೂಡಲೇ ಗ್ರಾಮ ಪಂಚಾಯತ್ ನಿಂದ ನೂತನ ಶೀಟ್ ಹಾಕಿ ಸ್ಪಂದಿಸಿದ್ದಾರೆ.

ಜೂ.25 ರಂದು ಭಾರೀ ಗಾಳಿ ಮಳೆಗೆ ಕೊಯನಾಡು ಸಾರ್ವಜನಿಕ ಬಸ್ ತಂಗುದಾಣದ ಸಿಮೆಂಟ್ ಶೀಟ್ ಹಾರಿ ಹೋಗಿ ಹಾನಿಯಾಗಿದ್ದು ,ದಿನನಿತ್ಯ ಸುಳ್ಯ ಮತ್ತು ಮಡಿಕೇರಿಗೆ ತೆರಳುವ ಪ್ರಯಾಣಿಕರು , ಶಾಲಾ ಮಕ್ಕಳಿಗೆ ಆಶ್ರಯ ವಾಗಿದ್ದ ಪ್ರಯಾಣಿಕರು ಪರದಾಡುವ ಸ್ಥಿತಿ ಎದುರಾಗಿತ್ತು. ಆದರೆ ಸುದ್ಧಿ ವೆಬ್ಸೈಟ್ ವರದಿ ಬಂದ ಹಿನ್ನಲೆ ಕೊಡಗು ಗ್ರಾಮ ಪಂಚಾಯತ್ ಅಧ್ಯಕ್ಷೆ ರಮಾದೇವಿ ಬಾಲಚಂದ್ರ ಕಳಗಿ ನೇತೃತ್ವದಲ್ಲಿ
ಬಸ್ ತಂಗುದಾಣಕ್ಕೆ ನೂತನ ಶೀಟ್ ಹಾಕಿದ್ದಾರೆ . ಆದರೆ ಬಸ್ ತಂಗುದಾಣ ಕಟ್ಟಡ ಹಳೆಯದಾಗಿದ್ದು , ಸದ್ಯ ಮಳೆ ವಿಪರೀತ ವಾದರೆ ಕುಸಿಯುವ ಭೀತಿ ಎದುರಾಗಿದೆ.
ಆದಷ್ಟು ಬೇಗನೆ ಸಂಬಂಧಿಸಿದ ಅಧಿಕಾರಿಗಳು ನೂತನ ಬಸ್ ನಿಲ್ದಾಣದ ಕೆಲಸ ಕಾರ್ಯಗಳನ್ನು ಮಾಡಬೇಕಾಗಿ ಗ್ರಾಮಸ್ಥರು ಮನವಿ ಮಾಡಿದ್ದಾರೆ.