ವಾಹನಗಳು ಜಖಂ- ಪ್ರಯಾಣಿಕರು ಅಪಾಯದಿಂದ ಪಾರು
ಸುಳ್ಯದ ಪರಿವಾರಕಾನ ಸರ್ವಿಸ್ ಸ್ಟೇಷನ್ ತಿರುವಿನ ಬಳಿ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ಕಾರುಗಳು ಸಂಪೂರ್ಣ ಜಖಂಗೊಂಡು ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ಇದೀಗ ವರದಿಯಾಗಿದೆ.
















ಸುಳ್ಯದಿಂದ ದೇವರಕೊಲ್ಲಿಯತ್ತ ಹೋಗುತ್ತಿದ್ದ ಕಾರು ಮತ್ತು ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಕಾರಿನ ನಡುವೆ ಈ ಅಪಘಾತ ಸಂಭವಿಸಿತು.
ಅಪಘಾತದ ಭೀಕರತೆಗೆ ವಾಹನಗಳು ಜಖಂಗೊಂಡು ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.










