ಸುಳ್ಯದ ಜೂನಿಯರ್ ಕಾಲೇಜ್ ರಸ್ತೆಯಲ್ಲಿ ಬರುತ್ತಿದ್ದ ಗ್ಯಾಸ್ ತುಂಬಿದ ಮಿನಿ ಲಾರಿಯೊಂದು ಮತ್ತೊಂದು ವಾಹನಕ್ಕೆ ಸೈಡ್ ಕೊಡುವ ಸಂದರ್ಭದಲ್ಲಿ ಚರಂಡಿಯಲ್ಲಿ ಹೂತು ಹೋದ ಘಟನೆ ಜೂ.26 ರಂದು ಸಂಜೆ ನಡೆದಿದೆ.
















ನಗರದ ವ್ಯಾಪ್ತಿಯಲ್ಲಿ ಕಾಂಕ್ರೀಟ್ ರಸ್ತೆ ಬದಿಯಲ್ಲಿ ಜೆ.ಜೆ.ಎಂ ಪೈಪು ಲೈನ್ ಅಳವಡಿಸಿ ಮಣ್ಣು ತುಂಬಿಸಲಾಗಿದ್ದು ಇದೀಗ ಮಳೆಗಾಲದಲ್ಲಿ ವಾಹನಗಳು ಸೈಡ್ ಕೊಡುವ ವೇಳೆಯಲ್ಲಿ ಚಾಲಕರು ತಿಳಿಯದೆ ರಸ್ತೆ ಯಿಂದ ಕೆಳಗಿಳಿಸುವಾಗ ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿರುತ್ತದೆ. ಜೆ.ಜೆ.ಎಂ.ನೀರಿನ ಪೈಪು ಲೈನ್ ಅವಾಂತರ ದಿಂದಾಗಿ ವಾಹನ ಸವಾರರಿಗೆಮಳೆಗಾಲದಲ್ಲಿ ನಿತ್ಯವೂ ಸಮಸ್ಯೆ ತಪ್ಪಿದಲ್ಲ.ಕಾಂಕ್ರೀಟ್ ರಸ್ತೆಯನ್ನು ತುಂಡರಿಸಿ ಪೈಪು ಲೈನ್ ಅಳವಡಿಸಿದ ಕಡೆಗಳಲ್ಲಿ ದೊಡ್ಡ ಗಾತ್ರದ ಹೊಂಡಗಳುನಿರ್ಮಾಣವಾಗಿ ವಾಹನ ಸವಾರರಿಗೆ ಹಾಗೂ ನಡೆದುಕೊಂಡು ಹೋಗುವಪಾದಚಾರಿಗಳಿಗೂ ಸಮಸ್ಯೆಎದುರಾಗಿದೆ. ಸುಮಾರು ಸಂಜೆ 4.30 ರ ಸಮಯಕ್ಕೆ ರಸ್ತೆ ಬದಿಯಲ್ಲಿ ಹೂತು ಹೋದ ಲಾರಿಯನ್ನು ಮೇಲಕ್ಕೆತ್ತಲು 7 ಗಂಟೆಯ ತನಕ
ಹರಸಾಹಸ ಪಡುವಂತಾಯಿತು.
ಬಳಿಕ ಜೆಸಿಬಿ ತರಿಸಿ ಲಾರಿಯನ್ನು ಚರಂಡಿಯಿಂದ ಮೇಲೆತ್ತಲಾಯಿತು.
ಈ ಸಂದರ್ಭದಲ್ಲಿ
ಅಲ್ಲಿ ಸೇರಿದ ಸ್ಥಳೀಯ ಸಾರ್ವಜನಿಕರು ಅಸರ್ಮಪಕ ಪೈಪು ಲೈನ್ ಕಾಮಗಾರಿ ಹಾಗೂ ಚರಂಡಿ ವ್ಯವಸ್ಥೆ ಇಲ್ಲದಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.










