ಶೇಖರ ಮಣಿಯಾಣಿ ನೇತೃತ್ವದ ಚಿಕ್ಕಮೇಳ ಕಾಯರ್ತೋಡಿ ದೇವಳದಿಂದ ಸಂಚಾರ ಆರಂಭ

0

ಮಳೆಗಾಲದ ಎರಡು ತಿಂಗಳ ಕಾಲ ಮನೆಮನೆಗೆ ಹೋಗಿ ಯಕ್ಷಗಾನ ಪ್ರದರ್ಶನ ನೀಡುವ ಯಕ್ಷ ಕಲಾವಿದರ ಕೂಡುವಿಕೆಯ, ಪ್ರಸಂಗಕರ್ತ ಶೇಖರ ಮಣಿಯಾಣಿ ನೇತೃತ್ವದ ಚಿಕ್ಕಮೇಳ ನಿನ್ನೆ ಸುಳ್ಯದ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಿಂದ ತಿರುಗಾಟ ಆರಂಭಿಸಿತು.

ಮನೆಮನೆಯಲ್ಲಿ ಯಕ್ಷ ವೈಭವ ಎಂಬ ಹೆಸರಲ್ಲಿ ಎಂಟನೇ ವರ್ಷದ ತಿರುಗಾಟ ಇದಾಗಿದ್ದು, ಜೂ.26 ರಂದು ದೇವಳದಲ್ಲಿ ಗೆಜ್ಜೆಕಟ್ಟಿ ಸೇವಾ ಪ್ರದರ್ಶನ ನೀಡುವುದರ ಮೂಲಕ ಚಾಲನೆ ನೀಡಲಾಯಿತು. ಕಾಯರ್ತೋಡಿ ಮಹಾವಿಷ್ಣು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನ್ಯಾಯವಾದಿ ಎಂ.ವೆಂಕಪ್ಪ ಗೌಡರು ತಿರುಗಾಟಕ್ಕೆ ಶುಭಹಾರೈಸಿದರು. ಮೇಳದ ಸಂಚಾಲಕ ಶೇಖರ ಮಣಿಯಾಣಿ, ಊರವರಾದ ಕೇಶವ ಆಚಾರ್ಯ, ದೇವಳದ ಮೇನೇಜರ್ ದೇವಿಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.
ಮೇಳದಲ್ಲಿ ಕಲಾವಿದರಾಗಿ ರಾಮ ನಾಯ್ಕ ಪೆರ್ಲ, ಬಾಲಕೃಷ್ಣ ಬೊಮ್ಮಾರು, ಶ್ರೀಧರ ಎಡಮಲೆ, ಗಂಗಾಧರ ಭಂಡಾರಿ ಪುತ್ತೂರು, ಲಕ್ಷ್ಮಣ ಆಚಾರ್ಯ ಎಡಮಂಗಲ, ಅತಿಥಿ ಕಲಾವಿದರಾಗಿ ಶಶಾಂಕ ಎಲಿಮಲೆ, ಬಾಲಕೃಷ್ಣ ದೇಲಂಪಾಡಿ, ಪ್ರವೀಣ್ ನಾಯಕ್ ದೊಡ್ಡತೋಟ ಭಾಗವಹಿಸಲಿದ್ದಾರೆ.