ಕೆ.ಎಸ್.ಆರ್.ಟಿ.ಸಿ ಚಾಲಕ ಸೋಮಪ್ಪ ಕೆ.ಪಿ ನಿವೃತ್ತಿ

0

ಕೆ.ಎಸ್ ಆರ್.ಟಿ.ಸಿ ಸುಳ್ಯ ಘಟಕದಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸೋಮವಾರ ಪೇಟೆ ತಾಲೂಕಿನ ಶಾಂತಳ್ಳಿ
ಕೆ.ಪಿ ಸೋಮಪ್ಪ ರವರು ಜೂ.30 ರಂದು ನಿವೃತ್ತಿ ಹೊಂದಲಿದ್ದಾರೆ.
ಇವರು 23.1.1999 ರಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿ, ಮಂಗಳೂರು ಘಟಕದಲ್ಲಿ ಉಗ್ರಾಣ ಶಾಖೆಯಲ್ಲಿ 1 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ, ನಂತರ ಮಂಗಳೂರು 1 ನೇ ಮತ್ತು 2 ನೇ ಘಟಕದಲ್ಲಿ, ಬಿ.ಸಿ ರೋಡ್ ಘಟಕದಲ್ಲಿ ಸುಮಾರು ವರ್ಷಗಳ ಕಾಲ ಕರ್ತವ್ಯ ಸಲ್ಲಿಸಿ. ನಂತರ 1 ವರ್ಷ ಪುತ್ತೂರು ಘಟಕದಲ್ಲಿ ಕರ್ತವ್ಯ ನಿರ್ವಹಿಸಿ 2017 ರಲ್ಲಿ ವರ್ಗಾವಣೆಗೊಂಡು ಸುಳ್ಯ ಘಟಕದಲ್ಲಿ ಕರ್ತವ್ಯ ನಿರ್ವಹಿಸಿರುತ್ತಾರೆ.

ಪತ್ನಿ ಇಂದಿರಾವತಿ ಗೃಹಿಣಿಯಾಗಿದ್ದು, ಪುತ್ರ ಹೇಮಂತ್ ಇಂಜಿನಿಯರಿಂಗ್ ಮೆಕ್ಯಾನಿಕಲ್ ಆಗಿದ್ದು ವಿದೇಶದಲ್ಲಿದ್ದಾರೆ.