ಆಲೆಟ್ಟಿಯ ಮುಖ್ಯ ರಸ್ತೆಗೆ ಬಿದ್ದ ಮರದ ಕೊಂಬೆ- ಸಂಚಾರಕ್ಕೆಅಡಚಣೆ, ಸ್ಥಳೀಯರಿಂದ ತೆರವು ಕಾರ್ಯ

0

ಆಲೆಟ್ಟಿ ಮುಖ್ಯ ರಸ್ತೆಯ ಮೇಲೆ ತಡರಾತ್ರಿ ಸಮಯದಲ್ಲಿ ಸುರಿದ ಗಾಳಿ‌ ಮಳೆಗೆ ಹಲಸಿನ ಮರದ ಕೊಂಬೆಯೊಂದು ಅಡ್ಡಲಾಗಿ ಬಿದ್ದುದರಿಂದ ವಾಹನ ಸಂಚಾರಕ್ಕೆ ಅಡಚಣೆಯುಂಟಾಯಿತು.


ಬೃಹತ್ ಗಾತ್ರದ ಹಲಸಿನ ಮರವೊಂದು ರಸ್ತೆಯ ಬದಿಯಲ್ಲಿದ್ದು ವಿಪರೀತ ಮಳೆಯಿಂದಾಗಿ ರಸ್ತೆಗೆ ಅಡ್ಡಲಾಗಿ ಬಿದ್ದುದರಿಂದ ಬೆಳಗ್ಗೆ ವಾಹನ ಸಂಚಾರಕ್ಕೆ ತೊಂದರೆಯಟಾಯಿತು. ಶಾಲಾ ವಾಹನಗಳು ಹಾಗೂ ಖಾಸಗಿ ವಾಹನಗಳು ಇದೇ ರಸ್ತೆಯ ಮೂಲಕ ಸುಳ್ಯಕ್ಕೆ ಬರಬೇಕಾಗಿರುವುದರಿಂದ ಸ್ಥಳಿಯರು ಸೇರಿ ಮರದ ಕೊಂಬೆಯನ್ನು ಕಡಿದು ತೆತವುಗೊಳಿಸುವ ಕಾರ್ಯಾಚರಣೆಯನ್ನು ಕೈಗೊಂಡು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.