ಸಂಪಾಜೆ ಗ್ರಾಮ ಪಂಚಾಯತ್ ಕೆ. ಡಿ. ಪಿ.ಸಭೆ

0

ಬೀದಿ ನಾಯಿ, ದನಗಳ ಹಾವಳಿ, ವಿದ್ಯುತ್ , ಆರೋಗ್ಯ , ಸವಲತ್ತುಗಳ ಬಗ್ಗೆ ಚರ್ಚೆ\

ದ. ಕ ಸಂಪಾಜೆ ಗ್ರಾಮ ಪಂಚಾಯತ್ ಕೆ.ಡಿ.ಪಿ. ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಮತಿ ಶಕ್ತಿವೇಲು ಅವರ ಅಧ್ಯಕ್ಷತೆಯಲ್ಲಿ ಜೂ.26 ರಂದು ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ನಡೆಯಿತು

ಸಭೆಯಲ್ಲಿ ಸಾಮಾಜಿಕ ಅರಣ್ಯ, ಕಂದಾಯ, ಕೃಷಿ, ಪಶು ವೈದ್ಯಕೀಯ ಇಲಾಖೆ, ಶಿಕ್ಷಣ, ಅರೋಗ್ಯ ಇಲಾಖೆ ಮೆಸ್ಕಾಂ, ಸೊಸೈಟಿ, ಡಿ. ಸಿ. ಸಿ ಬ್ಯಾಂಕ್, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿ ಇಲಾಖಾ ಸೌಲಭ್ಯ ಕೊರತೆಗಳ ಬಗ್ಗೆ ಮಾಹಿತಿಗಳನ್ನು ನೀಡಿದರು . ಪಶುಸಂಗೋಪನಾ ಇಲಾಖೆ ಅಧಿಕಾರಿ ಡಾ ನಿತಿನ್ ಪ್ರಭು ರವರಲ್ಲಿ ಗ್ರಾಮ ಪಂಚಾಯತ್ ಸದಸ್ಯರು ಬೀದಿ ನಾಯಿ ಹಾವಳಿ, ದನಗಳ ಹಾವಳಿ ಬಗ್ಗೆ ಚರ್ಚೆ ನಡೆಯಿತು. ಬಳಿಕ ಕಲ್ಲುಗುಂಡಿ ಪೊಲೀಸ್ ಠಾಣೆಯಲ್ಲಿ ಬೀದಿ ನಾಯಿಗಳು ಸಾರ್ವಜನಿಕರಿಗೆ, ಶಾಲಾ ಮಕ್ಕಳಿಗೆ ತೊಂದರೆ ಕೊಡುತ್ತಿದ್ದು , ಚುಚ್ಚು ಮದ್ದು ನೀಡಲು ಪಂಚಾಯತ್ ಸದಸ್ಯರು ತಿಳಿಸಿದರು.
ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯ ಅಧಿಕಾರಿ ಕರಣಿಯವರಲ್ಲಿ ಸಾಮಾಜಿಕ ಅರಣ್ಯದಲ್ಲಿ ಬಾಕಿ ಇರುವ ಅಕೇಶಿಯ ಮರದ ತೆರವು , ಹಣ್ಣು ಹಂಪಲು, ಹಾಗೂ ಮರ ಬೆಳೆಸುವ ಬಗ್ಗೆ ಪ್ರಸ್ತಾಪನೆ ಮಾಡಿದರು.ವಿದ್ಯುತ್ ಸಮಸ್ಯೆ ಬಗ್ಗೆ ಮೆಸ್ಕಾಂ ಇಲಾಖೆಯವರು ಮಾಹಿತಿ ನೀಡಿದರು

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ವೋಲ್ಗಾ ಡಿಸೋಜಾ, ಮಾಜಿ ಗ್ರಾಂ.ಪಂ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ ಉಪಾಧ್ಯಕ್ಷರಾದ ಎಸ್ ಕೆ ಹನೀಫ್ , ಸದಸ್ಯರುಗಳಾದ ಜಗದೀಶ್ ರೈ , ಸುಂದರಿ ಮುಂಡಡ್ಕ, ರಜನಿ ಶರತ್ ,ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಅನುಪಮ, ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿರೇಂದ್ರ ಜೈನ್ , ಕಲ್ಲುಗುಂಡಿ ಆರ್.ಎಂ.ಎಸ್.ಎ ಪ್ರೌಢಶಾಲೆ ಮುಖ್ಯ ಗುರುಗಳಾದ ಚಂದ್ರಾವತಿ, ದ.ಕ.ಜಿ.ಪ.ಹಿರಿಯ ಪ್ರಾಥಮಿಕ. ಶಾಲಾ ಮುಖ್ಯ ಶಿಕ್ಷಕಿ ಚಂದ್ರಾವತಿ , ಕೃಷಿ ಸಖಿ ಮೋಹಿನಿ ವಿಶ್ವನಾಥ್ , ಗ್ರಂಥಾಲಯ ಸಹಯಕಿ ನಸೀಮಾ, ಸಿಬ್ಬಂದಿ ಮಧುರ, ಅರೋಗ್ಯ ಇಲಾಖೆಯ ಹರ್ಷಿತಾ ಕುಮಾರಿ ರಾಜರಂಪುರ ಶಾಲಾ ಪ್ರಬಾರ ಮುಖ್ಯ ಗುರುಗಳಾದ ಭವಾನಿ ಶಂಕರ್ ಡಿ.ಸಿ.ಸಿ ಬ್ಯಾಂಕಿನ ಸಿಬ್ಬಂದಿ ನವೀನ್ ,ಗ್ರಾಮ ಸಹಾಯಕ ಸೋಮನಾಥ್, ಮೆಸ್ಕಾಂ ಇಲಾಖೆಯ ಸಂಗಮೇಶ್ ಉಪಸ್ಥಿತರಿದ್ದರು.

ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಸರಿತಾ ವೋಲ್ಗಾ ಡಿಸೋಜಾ ಸ್ವಾಗತಿಸಿ, ಉಪಾಧ್ಯಕ್ಷ ಎಸ್. ಕೆ.ಹನೀಫ್ ವಂದಿಸಿದರು.