ಸವಾಲನ್ನು ಎದುರಿಸುವ ಛಲ ವಿದ್ಯಾರ್ಥಿಗಳಲ್ಲಿರಬೇಕು : ಪ್ರದ್ಯುಮ್ನ
















ನಾವು ಸ್ಪಷ್ಟ ಗುರಿಯನ್ನು ನಿರ್ಧರಿಸಿ ಆ ದಿಕ್ಕಿನತ್ತ ಮುನ್ನಡೆಯಬೇಕಾದರೆ ಕಠಿಣ ಪರಿಶ್ರಮ, ಆಸಕ್ತಿ, ಸಾಧಿಸಲು ಬೇಕಾದ ಸಮರ್ಪಣಾ ಮನೋಭಾವ, ಸವಾಲುಗಳನ್ನು ಎದುರಿಸುವ ಸಾಮರ್ಥ್ಯ, ವಿಷಯದ ಕುರಿತಾದ ಶೋಧ, ಜ್ಞಾನ ಮೊದಲಾದ ಗುಣ ನಮ್ಮಲ್ಲಿ ಇರಬೇಕು ಎಂದು 2024ರಲ್ಲಿ ಯು.ಪಿ.ಎಸ್.ಸಿ 2 ನಡೆಸಿದ ಸಿ.ಡಿ.ಎಸ್ ಪರೀಕ್ಷೆಯಲ್ಲಿ ಅಖಿಲ ಭಾರತೀಯ ಮಟ್ಟದಲ್ಲಿ 14ನೇ ರ್ಯಾoಕ್ ಗಳಿಸಿ ನೌಕ ಸೇನಾ ಅಕಾಡೆಮಿಗೆ ಆಯ್ಕೆಯಾದ 2018-20ನೇ ಬ್ಯಾಚ್ ನ ಸಂಸ್ಥೆಯ ಹಿರಿಯ ವಿದ್ಯಾರ್ಥಿ ಪ್ರದ್ಯುಮ್ನ ಯು.ವಿ ಹೇಳಿದರು. ಅವರು ಸುಳ್ಯದ ನೆಹರು ಮೆಮೋರಿಯಲ್ ಪ.ಪೂ. ಕಾಲೇಜಿನಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ ಸಂಘದ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತ ಕೆವಿಜಿಯವರ ಶಿಕ್ಷಣ ಕ್ರಾಂತಿ ಸಮಾಜಕ್ಕೆ ಕೊಡುಗೆ ನೀಡಿದ್ದು ಮಾತ್ರವಲ್ಲದೇ ಆ ಸೇವಾ ಗುಣ ಸಂಸ್ಥೆಯ ಅಧ್ಯಕ್ಷರ ಮೂಲಕ ಮುಂದುವರಿದಿದೆ. ನಾನು ಪಿಯುಸಿಯಲ್ಲಿ ಎನ್.ಸಿ.ಸಿಯಲ್ಲಿ ತೊಡಗಿಸಿಕೊಂಡದ್ದು ನನ್ನ ಬದುಕಿನಲ್ಲಿ ಪ್ರಭಾವ ಬೀರಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎ.ಓ.ಎಲ್.ಇ ಅಧ್ಯಕ್ಷ ಡಾ. ಕೆ.ವಿ ಚಿದಾನಂದರು ದೀಪ ಪ್ರಜ್ವಲನೆಗೊಳಿಸಿ ಮಾತನಾಡಿ ವಿದ್ಯೆ ಕಲಿಯುವುದು ತಪಸ್ಸು ಇದ್ದಂತೆ, ವಿದ್ಯೆಗೆ ಸಮಾನವಾದುದು ಯಾವುದು ಇಲ್ಲ. ಗುರುಗಳ ಮಾರ್ಗದರ್ಶನ ಬಹಳ ಮುಖ್ಯ. ಪ್ರತಿಯೊಂದು ಸಾಧನೆಗೆ ಪ್ರಯತ್ನ ಮುಖ್ಯ. ಶಿಸ್ತುಬದ್ದ ಜೀವನ ಶೈಲಿ ನಮ್ಮ ವ್ಯಕ್ತಿತ್ವ ವಿಕಾಸಕ್ಕೆ ಪೂರಕ. ಪೂಜ್ಯ ಕೆವಿಜಿ ಯವರ ಪಂಚ ಸೂತ್ರಗಳು, ಅವರ ಶಿಕ್ಷಣ ಕಾಳಜಿ ಸಮಾಜಕ್ಕೆ ವಿದ್ಯಾವಂತರನ್ನು, ಸಾಧಕರನ್ನು ಕೊಡುಗೆಯಾಗಿ ನೀಡಿದೆ. ವಿದ್ಯಾರ್ಥಿಗಳು ಸಾಧನೆಗೈದು ಸಂಸ್ಥೆಗೆ ಒಳ್ಳೆಯ ಹೆಸರನ್ನು ತಂದುಕೊಡಿ ಎಂದರು. ವೇದಿಕೆಯಲ್ಲಿ ಅತಿಥಿಗಳಾಗಿ ಸಂಸ್ಥೆಯ ಆಡಳಿತ ಅಧಿಕಾರಿ ಚಂದ್ರಶೇಖರ ಪೇರಾಲ್, ಪದವಿ ವಿಭಾಗದ ಪ್ರಾಚಾರ್ಯರಾದ ಡಾ. ರುದ್ರಕುಮಾರ್ ಎಂ.ಎಂ, ಸಂಸ್ಥೆಯ ಪ್ರಾಚಾರ್ಯರಾದ ಮಿಥಾಲಿ ಪಿ ರೈ, ವಿದ್ಯಾರ್ಥಿ ಕ್ಷೇಮಾಧಿಕಾರಿ ಬೇಬಿ ವಿದ್ಯಾ ಪಿ.ಬಿ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಯಶವಂತ್ ಕುಶಾಲಪ್ಪ, ಶ್ರೇಯ ಎಂ.ಜಿ, ಸುಗುಣ, ಕೌಶಿಕ್ ಜಿ ಉಪಸ್ಥಿತರಿದ್ದರು. ದ್ವಿತೀಯ ಪಿಯುಸಿಯಲ್ಲಿ ಡಿಸ್ಟಿಂಕ್ಷನ್ ಪಡೆದ 36ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಹೆತ್ತವರು ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರಾದ ಶರಣ್ಯ ಬಳಗದವರು ಪ್ರಾರ್ಥಿಸಿದರು. ಪ್ರಾಚಾರ್ಯರಾದ ಮಿಥಾಲಿ ಪಿ ರೈ ಸ್ವಾಗತಿಸಿ, ಹೆಡ್ ಬಾಯ್ ಯಶವಂತ್ ಕುಶಾಲಪ್ಪ ವಂದಿಸಿದರು. ಪ್ರಾಂಶುಪಾಲರು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ವಿದ್ಯಾರ್ಥಿ ಪ್ರತಿನಿಧಿಗಳಿಗೆ ಬ್ಯಾಡ್ಜ್ ಪ್ರದಾನ ಮಾಡಿದರು. ವಿದ್ಯಾರ್ಥಿ ಕ್ಷೇಮಾಧಿಕಾರಿ ಬೇಬಿ ವಿದ್ಯಾ ಪಿ.ಬಿ ಪ್ರತಿಜ್ಞಾ ವಿಧಿ ಬೋಧಿಸಿದರು. ಹೆಡ್ ಗರ್ಲ್ ಶ್ರೇಯ ಎಂ.ಜಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿ ಪ್ರದ್ಯುಮ್ನ ಅವರನ್ನು ಸನ್ಮಾನಿಸಲಾಯಿತು. ಡಿಸ್ಟಿಂಕ್ಷನ್ ಅಂಕ ಗಳಿಸಿದವರ ಪಟ್ಟಿಯನ್ನು ಉಪನ್ಯಾಸಕಿಯರಾದ ಸಾವಿತ್ರಿ ಕೆ, ರೇಷ್ಮಾ ಎಂ, ಉಮಾಶ್ರೀ ಪ್ರಭು ಎ.ಯು, ರಕ್ಷಿತ್ ಬಿ ವಾಚಿಸಿದರು. ಹಿರಿಯ ವಿದ್ಯಾರ್ಥಿಗಳಾದ ಅಮೋಘ, ಕೃತ ಸ್ವರದೀಪ್ತ, ಕೃಷ್ಣ ವಂಶಿ ಅನಿಸಿಕೆ ವ್ಯಕ್ತ ಪಡಿಸಿದರು. ವಿದ್ಯಾರ್ಥಿಗಳಾದ ತನುಶ್ರೀ ಮತ್ತು ತಂಗಮ್ಮ ಕಾರ್ಯಕ್ರಮ ನಿರೂಪಿಸಿದರು.










