ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ) ಸುಳ್ಯ, ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಜಾಲ್ಸೂರು ವಲಯ ಹಾಗೂ ಅಖಿಲ ಭಾರತ ಕರ್ನಾಟಕ ಜನಜಾಗೃತಿ ವೇದಿಕೆ ಜಾಲ್ಸೂರು ವಲಯ ಹಾಗೂ ಚೊಕ್ಕಾಡಿ ಪ್ರೌಢ ಶಾಲೆ ಕುಕ್ಕುಜಡ್ಕ ಇದರ ಆಶ್ರಯದಲ್ಲಿ ವಿಶ್ವ ಮಾದಕ ವಸ್ತುಗಳ ವಿರೋಧಿ ದಿನ ಕಾರ್ಯಕ್ರಮ 26. ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಗುರುಗಳಾದ ಸಂಕೀರ್ಣ ಎ ಎಲ್ ಇವರು ವಹಿಸಿ ‘ ಮಾದಕ ವಸ್ತುಗಳು ನಮ್ಮ ಮತ್ತು ಮನೆಯವರ ನೆಮ್ಮದಿಯನ್ನು ಹಾಳು ಮಾಡುತ್ತದೆ, ಮಾದಕ ಮುಕ್ತ ಸಮಾಜ ನಿರ್ಮಾಣವಾಗಬೇಕಾದರೆ ವಿದ್ಯಾರ್ಥಿಗಳು ವ್ಯಸನಕ್ಕೆ ಬಲಿಯಾಗದಂತೆ ಎಚ್ಚರ ವಹಿಸುವುದು ಅತೀ ಅಗತ್ಯ ಎಂದರು.
















ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ನೆಹರು ಸ್ಮಾರಕ ಪದವಿ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಅನುರಾಧ ಕುರುಂಜಿಯವರು ಮಾತನಾಡಿ,’ ಸದೃಢ ಯುವ ಭಾರತ ನಿರ್ಮಾಣಕ್ಕೆ ಮಾದಕ ವ್ಯಸನಮುಕ್ತ ಯುವಜನತೆ ಅಗತ್ಯ ಇದೆ, ಎಲ್ಲಾ ವ್ಯಸನದಿಂದ ಮುಕ್ತರಾದವರು ಸ್ವರ್ಗವನ್ನು ನಾವು ಇಲ್ಲಿ ಕಾಣಬಹುದು ಬದಲಾಗಿ ಮಾದಕ ವ್ಯಸನಿಗಳು ನರಕವನ್ನು ಅನುಭವಿಸಿ ಸಮಾಜಕ್ಕೆ ಹೊರೆಯಾಗುತ್ತಾರೆ ಎಂದರು. ಹದಿಹರೆಯದ ಮಕ್ಕಳು ಅತಿಯಾಗಿ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ, ಇವರಿಗೆ ಮಾದಕ ವಸ್ತುಗಳ ಸೇವನೆಯ ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ ವ್ಯಸನ ಮುಕ್ತ ಜೀವನ ನಡೆಸಬೇಕೆಂದು ಸೂಕ್ತ ಉದಾಹರಣೆಗಳ ಮೂಲಕ ಉತ್ತಮವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು.ಜಾಲ್ಸೂರು ವಲಯದ ಜನಜಾಗೃತಿ ವೇದಿಕೆಯ ವಲಯಾಧ್ಯಕ್ಷರಾದ ಭಾಸ್ಕರ್ ರವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ,’ಸ್ವಾಸ್ತ್ಯ ಸಮಾಜ ನಿರ್ಮಾಣವಾಗಬೇಕಾದರೆ ಯುವಜನತೆಯ ಪಾತ್ರ ಬಹಳ ಮುಖ್ಯ ಹಾಗೂ ಹದಿಹರೆಯದಲ್ಲಿ ದಾರಿತಪ್ಪುವ ವಿದ್ಯಾರ್ಥಿಗಳು ವ್ಯಸನಕ್ಕೆ ಬಲಿಯಾಗದಂತೆ ಜಾಗೃತರಾಗಿರಬೇಕು.ಸಪ್ತ ವ್ಯಸನಕ್ಕೆ ಬಲಿಯಾಗದಂತೆ ಎಚ್ಚರ ವಹಿಸುವುದು ಒಳ್ಳೆಯದು ಹಾಗೂ ದುಶ್ಚಟಗಳಿಗೆ ಬಲಿಯಾಗಿ ಸುಂದರ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ, ವ್ಯಸನಮುಕ್ತ ಜೀವನ ನಡೆಸಿ’ಎಂದು ವಿದ್ಯಾರ್ಥಿಗಳಿಗೆ ಕರೆಯನ್ನು ನೀಡಿದರು.

ವೇದಿಕೆಯಲ್ಲಿ ಚೊಕ್ಕಾಡಿ ಪ್ರೌಢ ಶಾಲೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ರಾದ ವಿಶ್ವನಾಥ ಮೂಕಮಲೆ, ಆಂಗ್ಲ ಮಾಧ್ಯಮದ ಮುಖ್ಯ ಶಿಕ್ಷಕಿ ಶ್ರೀಮತಿ ಭವ್ಯ , ಕುಕ್ಕುಜಡ್ಕ ಒಕ್ಕೂಟದ ಅಧ್ಯಕ್ಷರಾದ ಹರಿಶ್ಚಂದ್ರ ವೇದಿಕೆಯಲ್ಲಿ ಉಪಸ್ಥತರಿದ್ದರು. ಜಾಲ್ಸೂರು ವಲಯದ ಮೇಲ್ವಿಚಾರಕರಾದ ಶ್ರೀಮತಿ ಜಯಶ್ರೀ ಇವರು ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಪೈಲಾರು ಸೇವಾ ಪ್ರತಿನಿಧಿ ಚಂದ್ರಪ್ರಕಾಶ್ ಇವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.










