ಪಂಜ: ಸರಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳ ಮಂತ್ರಿ ಮಂಡಲ ರಚನೆ

0

ಪಂಜ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ
ಸಂಸತ್ತಿಗೆ ಚುನಾವಣೆಯನ್ನು ಮಾಡಲಾಯಿತು. ಮೂರು ತರಗತಿಗಳಿಂದ ಒಟ್ಟು 15 ವಿದ್ಯಾರ್ಥಿಗಳು ನಾಮಪತ್ರ ಸಲ್ಲಿಸಿದ್ದರು ಪ್ರತಿ ವಿದ್ಯಾರ್ಥಿಗಳು ಕೂಡ ಮತ ಪತ್ರದ ಮೂಲಕ ತಮಗೆ ಬೇಕಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಒಟ್ಟು ವಿದ್ಯಾರ್ಥಿಗೆ 12 ಮತ ಚಲಾಯಿಸಲು ಅವಕಾಶವನ್ನು ನೀಡಲಾಯಿತು.ಒಟ್ಟು 12 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಶಾಲಾ ಮುಖ್ಯಮಂತ್ರಿ ಯಾಗಿ ಶ್ರೀಜಿತ್, ಉಪಮುಖ್ಯಮಂತ್ರಿಯಾಗಿ ತೀರ್ಥೇಶ್, ಗೃಹ ಮಂತ್ರಿಯಾಗಿ ಸುಜಿತ್ ಕ್ರೀಡಾ ಮಂತ್ರಿಗಳಾಗಿ ಸಾಕೇತ್ ,ಪ್ರಜ್ವಲ್ ಶಿಕ್ಷಣ ಮತ್ತು ವಾರ್ತಾ ಮಂತ್ರಿಯಾಗಿ ಮುರ್ಷಿದ್ ,ಆರೋಗ್ಯ ಮತ್ತು ಸ್ವಚ್ಛತಾ ಮಂತ್ರಿಗಳಾಗಿ ವರ್ಷ, ಲೋಕೇಶ್, ಆಹಾರ ಮಂತ್ರಿಯಾಗಿ ದೀಪ್ತಿ, ಸಾಂಸ್ಕೃತಿ ಮಂತ್ರಿಯಾಗಿ ಜಾಹ್ನವಿ,, ತೋಟಗಾರಿಕಾ ಮತ್ತು ನೀರಾವರಿ ಮಂತ್ರಿಯಾಗಿ ಸಾನ್ವಿತಾ , ಜನಿತ್, ವಿರೋಧ ಪಕ್ಷದ ನಾಯಕನಾಗಿ ಹಿತೇಶ್ ಜಿ ಎನ್ ನಾಯಕಿಯಾಗಿ ಅನ್ವಿತಾ ಪಿ, ತಾನ್ ವಿ. ಕೆ ಆಯ್ಕೆಯಾದರು.