ಸುಳ್ಯ ಕೆಎಫ್ ಡಿಸಿ ವಸತಿ ಗೃಹದಿಂದ ಕಳವು ಪ್ರಕರಣ : ಆರೋಪ‌ ಸಾಬೀತು

0

ಸುಳ್ಯದ ಕೆಎಫ್ ಡಿಸಿ ವಸತಿ‌ ಗೃಹದಿಂದ ಕಳವು ಪ್ರಕರಣದ ವಿಚಾರಣೆ ಸುಳ್ಯ ನ್ಯಾಯಾಲಯದಲ್ಲಿ ನಡೆದು ಆರೋಪ‌ ಸಾಬೀತಾಗಿರುವುದಾಗಿ ತಿಳಿದುಬಂದಿದೆ.

2024 ಎಪ್ರಿಲ್ 29ರಂದು‌ ಆರೋಪಿ ಆನಂದ ಎಂಬಾತ ಸುಳ್ಯ ಕಸಬಾ ಗ್ರಾಮದ ಕೇರ್ಪಳ ರಸ್ತೆಯ ಟೌನ್ ಹಾಲ್ ಬಳಿ ಇರುವ ಕೆ.ಎಫ್.ಡಿ.ಸಿ. ವಸತಿ ಗೃಹಕ್ಕೆ ಹಿಂಬದಿಯಿಂದ ಬಾಗಿಲನ್ನು ದೂಡಿ ತೆಗೆದು ಮಲಗುವ ಕೋಣೆಯ ಕಪಾಟಿನಲ್ಲಿದ್ದ ನಗದು 30 ಸಾವಿರ ರೂಪಾಯಿ ಹಾಗೂ 1 ಲಕ್ಷ ರೂಪಾಯಿ ಮೌಲ್ಯದ ಒಂದು ಜೊತೆ ಚಿನ್ನದ ಬೆಂಡೋಲೆ, ಒಂದು ಚಿನ್ನದ ಚೈನ್, ಒಂದು ಕರಿಮಣಿ ಸರ, ಎರಡು ಚಿನ್ನದ ಉಂಗುರಗಳನ್ನು ಕಳ್ಳತನ ಮಾಡಿಕೊಂಡು ಹೋಗಿ ಹಣವನ್ನು ತನ್ನ ಸ್ವಂತಕ್ಕೆ ಖರ್ಚು ಮಾಡಿ ಕಳ್ಳತನ ಮಾಡಿದ ಸುಮಾರು 1 ಲಕ್ಷ ರೂಪಾಯಿ ಮೌಲ್ಯದ ಒಟ್ಟು 22.439 ಗ್ರಾಂ ಚಿನ್ನಾಭರಣಗಳನ್ನು ಮಾರಾಟ ಮಾಡಿದ ಪ್ರಕರಣವಾಗಿದೆ. ಈ ಕುರಿತು ಸುಳ್ಯ ಸುಳ್ಯ ಪೋಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿತ್ತು.

ಸುಳ್ಯದ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶರಾದ ಬಿ. ಮೋಹನ್ ಬಾಬು ರವರು ಈ ಪ್ರಕರಣದ ವಿಚಾರಣೆ ನಡೆಸಿ ಆರೋಪಿಯನ್ನು ಜೂನ್ 27, 2025 ರಂದು ದೋಷಿ ಎಂದು ತೀರ್ಪು ನೀಡಿರುತ್ತಾರೆ.

ಶಿಕ್ಷೆಯ ಪ್ರಮಾಣದ ಬಗ್ಗೆ ವಾದಮಂಡನೆಗಾಗಿ ದಿನಾಂಕ 01.07.2025 ಕ್ಕೆ ನಿಗದಿಪಡಿಸಲಾಗಿದ್ದು ನಂತರ ಪ್ರಕಟಿಸಲಾಗುವುದು ಎಂದು ತಿಳಿದುಬಂದಿದೆ.

ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರು ಪ್ರಕರಣವನ್ನು ನಡೆಸಿ, ವಾದ ಮಂಡಿಸಿರುತ್ತಾರೆ.