ಜು.15 ರಂದು ಅಮೃತಮಹೋತ್ಸವ ವರ್ಷಾಚರಣೆ ಕಾರ್ಯಕ್ರಮಕ್ಕೆ ಚಾಲನೆ
ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಪೊಷಕರಿಂದ ಆಗಬೇಕು: ಆರ್ .ಕೆ ಚೊಕ್ಕಾಡಿ
ಅಮೃತ ಮಹೋತ್ಸವದ ವರ್ಷಾಚರಣೆ ಹೊಸ್ತಿಲಲ್ಲಿರುವ ಸೈಂಟ್ ಬ್ರಿಜಿಡ್ಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಕರ ಸಭೆ ಜು.28 ರಂದು ನಡೆಯಿತು.
ಸಭಾ ಕಾರ್ಯಕ್ರಮವನ್ನು ಸೈಂಟ್ ಬ್ರಿಜಿಡ್ಸ್ ಚರ್ಚ್ ಧರ್ಮಗುರುಗಳಾದ ರೆ.ಪಾ.ಆಲ್ವಿನ್ ಎಡ್ವರ್ಡ್ ಡಿಕುನ್ಹಾ ಉದ್ಘಾಟಿಸಿದರು.
ವೇದಿಕೆಯಲ್ಲಿ ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷ ನವೀನ್ ಮಚಾದೋ,ಪೋಷಕರ ಸಮಿತಿ ಉಪಾಧ್ಯಕ್ಷ ನವೀನ್ ಚಾತುಬಾಯಿ,ನ.ಪಂ ಸದಸ್ಯ ಡೇವಿಡ್ ದೀರಾ ಕ್ರಾಸ್ತ,ಉಪಸ್ಥಿತರಿದ್ದರು .
















ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಅಗಮಿಸಿದ ನಿವೃತ್ತ ಪ್ರಾಂಶುಪಾಲರಾದ ರಾಮಕೃಷ್ಣ ಚೊಕ್ಕಾಡಿ ಮಾತನಾಡಿ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಪೋಷಕರಿಂದ ಆಗಬೇಕು ವಿದ್ಯಾರ್ಥಿಗಳನ್ನು ಕೇವಲ ಅಂಕಪಟ್ಟಿಯ ಹಿಂದೆ ಓಡಿಸಬೇಡಿ ಅಂಕಪಟ್ಟಿಯ ಜೊತೆ ಸಂಸ್ಕಾರ,ಧೈರ್ಯ, ನಂಬಿಕೆ, ಪ್ರೀತಿ ವಿಶ್ವಾಸದ ಶಿಕ್ಷಣವನ್ನು ಕಲಿಸಿ ಆಗ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ ಆತ್ಮವಿಶ್ವಾಸ ಹೆಚ್ಚಿದರೆ ಮಕ್ಕಳು ಹೊಂದಾಣಿಕೆ ಬದುಕಿಗೆ ಪೂರಕವಾಗಿ ಬೆಳೆಯುತ್ತಾರೆ ಎಂದವರು ಹೇಳಿದರೆ.
ಶಾಲಾ ಮುಖ್ಯೋಪಾಧ್ಯಾಯನಿ ಸಿಸ್ಟರ್ ಅಂತೋನಿ ಮೇರಿ ಪ್ರಸ್ತಾವಿಕ ಮಾತುಗಳನ್ನಾಡಿದರು.
ಶಿಕ್ಷಕಿ ಸಿಸ್ಟರ್ ಗ್ರೇಸಿ ಡಿಸೋಜ ಸ್ವಾಗತಿಸಿದರು,ಶಿಕ್ಷಕಿ ವಲ್ಸ ಕಾರ್ಯಕ್ರಮ ನಿರೂಪಿಸಿದರು.
ಶಿಕ್ಷಕಿ ದೀಪಿಕಾ ವಂದನಾರ್ಪಣೆ ಮಾಡಿದರು.
ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಜುಲೈ 15 ರಂದು ಅಮೃತಮಹೋತ್ಸದ ವರ್ಷಾಚರಣೆ ಕಾರ್ಯಕ್ರಮಕ್ಕೆ ಚಾಲನೆ ಕಾರ್ಯಕ್ರಮ ನಡೆಯಲಿದೆ ಎಂದು ಈ ಸಂದರ್ಭದಲ್ಲಿ ದಿನಾಂಕ ಘೋಷಣೆ ಮಾಡಿದರು.



