ಅಡ್ಕಾರು – ಪೇರಾಲು ರಸ್ತೆಯಲ್ಲಿ ಚರಂಡಿ ಇಲ್ಲದೆ ಬಾರೀ ಸಮಸ್ಯೆ

0

ಸರಿಪಡಿಸಬೇಕಾದವರು ಯಾರು? : ಜನಪ್ರತಿನಿಧಿಗಳಿಗೆ ಕಾಣುತ್ತಿಲ್ಲವೇ : ಜನರ ಪ್ರಶ್ನೆ

ಜಾಲ್ಸೂರು ಗ್ರಾಮದ ಅಡ್ಕಾರು ದ್ವಾರದ ಬಳಿಯಿಂದ ಮಂಡೆಕೋಲು ಗ್ರಾಮದ ಪೇರಾಲು ತನಕ ರಸ್ತೆಯ ಎರಡೂ ಕಡೆಯಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಬಾರೀ ಸಮಸ್ಯೆ ಎದುರಾಗಿದೆ.

ಈ ರಸ್ತೆಯಲ್ಲಿ ಪ್ರತೀ ನಿತ್ಯ ನೂರಾರು ವಾಹನಗಳು, ಸಾವಿರಾರು ಮಂದಿ ಓಡಾಡುತ್ತಾರೆ.‌ ಮಳೆಗಾಲವಾದುದರಿಂದ ಮಳೆ ನೀರು ರಸ್ತೆಯಲ್ಲಿ ಹರಿಯದೇ ರಸ್ತೆಯಲ್ಲೇ‌ ನಿಲ್ಲುತ್ತಿದೆ. ಇದರಿಂದ ಸಂಚಾರ ಬಾರೀ ದುಸ್ತರವಾಗಿದೆ. ಇನ್ನೂ ಕೆಲವು ಕಡೆಗಳಲ್ಲಿ ಮಣ್ಣುಗಳು‌ ಬಂದು ರಸ್ತೆಯಲ್ಲಿ ನಿಂತಿದೆ.

ರಸ್ತೆಯ ಎರಡೂ‌ ಕಡೆಗಳಲ್ಲಿಯೂ ಸಮರ್ಪಕ ಚರಂಡಿ ಮಾಡಿದರೆ ಈ ಸಮಸ್ಯೆ ಇರುವುದಿಲ್ಲ. ಆದರೆ ಇದನ್ನು ಸರಿಪಡಿಸುವವರು ಯಾರೂ. ಇಲಾಖೆಯವರಿಗೆ ಫೋನ್ ಮಾಡಿದರೆ ಅವರು ಗಮನ ಹರಿಸಿಸುತ್ತಿಲ್ಲ. ಈ ಭಾಗದ ಜನಪ್ರತಿನಿಧಿಗಳು ಈ ರಸ್ತೆ ಬಳಸುತ್ತಾರಾದರೂ ಸಮಸ್ಯೆ ಪರಿಹಾರಕ್ಕೆ ಗಮನ ಹರಿಸುತ್ತಿಲ್ಲ ಎನ್ನುತ್ತಾರೆ ಪೇರಾಲಿನ ಅಶ್ವಿನ್ ಎಂಬವರು.‌

ಅಡ್ಕಾರು – ಪೇರಾಲು ರಸ್ತೆಯ ಚರಂಡಿ ಸಮಸ್ಯೆಯನ್ನು ಅರಿತು ಸಂಬಂಧ ಪಟ್ಟವರು ಸರಿಪಡಿಸಬೇಕಾಗಿದೆ.