ಸಂಧ್ಯಾರಶ್ಮಿ ನಿವೃತ್ತ ನೌಕರರ ಮತ್ತು ಪಿಂಚಣಿದಾರರ ಸಂಘದ ಮರ್ಕಂಜ ಘಟಕದ ಸಭೆ

0

ಇತ್ತೀಚೆಗೆ ಸಂಧ್ಯಾರಶ್ಮಿ ನಿವೃತ್ತ ನೌಕರರ ಮತ್ತು ಪಿಂಚಣಿದಾರರ ಸಂಘದ ಮರ್ಕಂಜ ಘಟಕದ ಸಭೆ ಜೂ. ೨೪ರಂದು ಮರ್ಕಂಜ ಪ್ರಾ.ಕೃ.ಪ.ಸ.ಸಂಘದ ಐಸಿರಿ ಸಭಾಭವನದಲ್ಲಿ ನಡೆಯಿತು.
ಮರ್ಕಂಜ ಘಟಕದ ಅಧ್ಯಕ್ಷ , ನಿವೃತ್ತ ಶಿಕ್ಷಕ ಅಚ್ಚುತ ಪಿ. ಸಭಾಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಂಘದ ಗೌರವಾಧ್ಯಕ್ಷ ಎ. ಬಾಬು ಗೌಡ, ಪಿ.ಆರ್.ಒ. ಚೆನ್ನಕೇಶವ, ಖಜಾಂಜಿ ಸುಬ್ರಹ್ಮಣ್ಯ ಹೊಳ್ಳ, ನಿವೃತ್ತ ಶಿಕ್ಷಕಿ ಗಿರಿಜಾ ಉಪಸ್ಥಿತರಿದ್ದರು. ಮರ್ಕಂಜ ಘಟಕದ ನೋಡೆಲ್ ಅಧಿಕಾರಿ, ನಿವೃತ್ತ ಪ್ರಾಂಶುಪಾಲ ಕೆ.ವಿ.ದಾಮೋದರ ಗೌಡರು ಸಭೆಯ ಕಾರ್ಯ ಬಗ್ಗೆ, ಡಾ. ವೈಭವಿ ಆರೋಗ್ಯ ಮಾಹಿತಿ, ಎ. ಅಬ್ದುಲ್ಲಾರವರು ರಾಜ್ಯ ಪರಿಷತ್ ಸಭೆಯಲ್ಲಿ ಭಾಗವಹಿಸಿದ ಬಗ್ಗೆ, ಸಂಘದ ಬೈಲಾದ ಬಗ್ಗೆ, ಪಿಂಚಣಿದಾರರಿಗೆ ಸಿಗುವ ಸವಲತ್ತುಗಳ ಬಗ್ಗೆ, ಡಾ. ರಂಗಯ್ಯರವರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಘಟಕದ ಕಾರ್ಯದರ್ಶಿ ವೆಂಕಟ್ರಮಣ ಕೆ.ಎಸ್. ಸ್ವಾಗತಿಸಿದರು.