ವಿಕಲಚೇತನ ಹಾಗೂ ಅನಾಥ ಮಕ್ಕಳ ಬಗ್ಗೆ ವಿಶೇಷ ಕಾಳಜಿವಹಿಸಿ:ಅಝ್ಹಹರಿ
ಪೂರ್ವಜರ ಮಾರ್ಗದರ್ಶನವೇ ಶ್ರೇಷ್ಠ: ಖಲೀಲ್ ತಂಙಳ್
ಸುಳ್ಯ ಉದ್ಯಮಿ ಸಮಾಜಸೇವಕ ಅಬ್ದುಲ್ ಲತೀಫ್ ಹರ್ಲಡ್ಕ ರವರ ನೇತ್ರತ್ವದಲ್ಲಿ ಅನುಸ್ಮರಣೆ ಹಾಗೂ ದುವಾ ಮಜ್ಲಿಸ್ ಕಾರ್ಯಕ್ರಮ ನಡೆಯಿತು.
ಲತೀಫ್ ಹರ್ಲಡ್ಕ ರವರ ತಾಯಿ ಹಾಜಿರ ರವರ 30ನೇ ಪುಣಸ್ಮರಣೆ ಮತ್ತು ಅವರ ಮಾವ ಅಬ್ದುಲ್ಲಾ ರವರ 20ನೇ ಪುಣ್ಯ ಸ್ಮರಣೆ ಹಾಗೂ ಅಗಲಿದ ಉಮರಾ,ಉಲಮಾ,ಸಾದತ್ ಗಳ ಅನುಸ್ಮರಣೆ ಕಾರ್ಯಕ್ರಮ ಅನ್ಸಾರಿಯಾ ಗಲ್ಪ್ ಆಡಿಟೋರಿಯಂ ನಲ್ಲಿ ಜೂ.27ರಂದು ನಡೆಯಿತು.
















ಅನುಸ್ಮರಣೆ ಕಾರ್ಯಕ್ರಮವನ್ನು ಅಖಿಲ ಭಾರತ ಜಂಯ್ಯತ್ತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಸಯ್ಯದ್ ಇಬ್ರಾಹಿಂ ಖಲೀಲ್ ತಂಙಳ್ ದುವಾಶಿರ್ವಚನ ಮೂಲಕ ದುವಾ ಮಜ್ಲಿಸ್ ನೇತ್ರತ್ವ ವಹಿಸಿ ಈಗೀನ ಕಾಲದ ಜೀವನ ಶೈಲಿ ಬದಲಾಗಿದೆ ಆದರಿಂದ ಸಮಾಜದಲ್ಲಿ ಆತಂಕಗಳೂ ಹೆಚ್ಚುತ್ತಿದೆ ಯಾರು ಕೂಡ ನಮ್ಮ ಪೂರ್ವಜರ ಮಾರ್ಗದರ್ಶನವನ್ನು ಅನುಸರಿಸುತ್ತಿಲ್ಲ ಅದುವೇ ದೊಡ್ಡ ದುರಂತ ಎಂದವರು ಮಾತನಾಡಿದರು.
ಮರ್ಕಜ್ ನ್ಯಾಲೇಜ್ ಸಿಟಿ ಆಡಳಿತ ನಿರ್ದೇಶಕ ಡಾ.ಅಬ್ದುಲ್ ಹಕೀಂ ಅಝ್ಹಹರಿಮಾತನಾಡಿ ನಮ್ಮ ಸಮಾಜದಲ್ಲಿ ಎಲ್ಲಿ ಬಡವರ ಇದ್ದಾರೆ,ಎಲ್ಲಿ ವಿಶೇಷ ಚೇತನ ರಿದ್ದಾರೆ,ಎಲ್ಲಿ ಅನಾಥರಿದ್ದಾರೆ ಅಂತವರನ್ನು ಹುಡುಕಿ ಅವರಿಗೆ ಒಳ್ಳೆಯ ಶಿಕ್ಷಣವನ್ನು ಕೊಟ್ಟು ಅವರನ್ನು ಸಮಾಜದ ಮುಖ್ಯ ವಾಹಿನಿ ತರುವಂತ ಕೆಲಸಮಾಡಿದರೆ ಮಾತ್ರ ದೇವರ ಕೃಪೆ ಭೂಮಿ ಇರುತ್ತದೆ ಎಂದವರು ಹೇಳಿದರು.

.ಮುತ್ತನೂರು ತಂಙಳ್ ತಹಲೀಲ್ ಸಮರ್ಪಣೆ ಕಾರ್ಯಕ್ರಮದ ನೇತ್ರತ್ವ ವಹಿಸಿದರು.
ಪ್ರಖ್ಯಾತ ಧಾರ್ಮಿಕ ಪಂಡಿತ ಪೇರೋಡ್ ಅಬ್ದುಲ್ ರಹಿಮಾನ್ ಸಖಾಫಿ,ಸಯ್ಯದ್ ಕಾಜೂರು ತಂಙಳ್, ಹಝ್ರತ್ ಕಾವಳಕಟ್ಟೆ,ಲತೀಪ್ ಸಖಾಫಿ ಮದನಿಯಂ,ರಫೀಕ್ ಸಹದಿ ದೇಲಂಪಾಡಿ,ಜಿಪ್ರಿ ತಂಙಳ್,ಜಲಾಲುದ್ದೀನ್ ತಂಙಳ್ ದುಗಲಡ್ಕ,ಹದ್ದಾದ್ ತಂಙಳ್, ಸಯ್ಯದ್ ಮುಖ್ತಾರ್ ತಂಙಳ್ ಕುಂಬೋಳ್,ಕಣ್ಣವ್ವಂ ತಂಙಳ್ ಅದೂರು,ಅಶ್ರಫ್ ತಂಙಳ್ ಮಜ್ಲಿಸ್, ಖಲೀಲ್ ಸ್ವಲಾಹ್ ತಂಙಳ್, ನೌಫಲ್ ಸಖಾಫಿ ಕಳಸ,ಒಲೆಮುಂಡೋವ್ ಉಸ್ತಾದ್,ಸಯ್ಯದ್ ಕುಂಞಿಕೋಯ ತಂಙಳ್, ಕಲ್ಪತರ ಅಬ್ದುಲ್ ಖಾದರ್ ಮುಸ್ಲಿಯಾರ್,ಅಬೂಸಾಲಿಹ್ ಉಸ್ತಾದ್,ಯೂನಸ್ ಸಖಾಫಿ ,ಮುದುಗಡ ಸಖಾಫಿ ಸೇರಿದಂತೆ ಅನೇಕ ಧಾರ್ಮಿಕ ಸಾಮಾಜಿಕ, ನಾಯಕರು ಗಳು ಭಾಗವಹಿಸಿದರು.
ಕಾರ್ಯಕ್ರಮದ ನಂತರ ವೇದಿಕೆಯಲ್ಲಿ ಎರಡು ನಿಖಾಹ್ ನಡೆಯಿತು.
ಕಾರ್ಯಕ್ರಮದ ಕೊನೆಯಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಜನರಿಗೆ ಅನ್ನಸಂತರ್ಪಣೆ ವಿತರಣೆ ಮಾಡಲಾಯಿತು.

ಅಗಮಿಸಿದ ಎಲ್ಲರನ್ನೂ ಹರ್ಲಡ್ಕ ವಿಲ್ಲಾದ ಅಬ್ದುಲ್ ಲತೀಫ್ ಹರ್ಲಡ್ಕ , ಸಹೋದರ ಇರ್ಷಾದ್ ಹರ್ಲಡ್ಕ ಮತ್ತು ಕುಟುಂಬಸ್ಥರು ಸ್ವಾಗತಿಸಿದರು.










