ರೋಚಕತೆಯ ಬದಲು ರಚನಾತ್ಮಕತೆಯತ್ತ ಲಕ್ಷ್ಯ ಅಗತ್ಯ : ನಾಯರ್ ಕೆರೆ
ಕಷ್ಟದ ಅನುಭವಗಳ ನೆನಪಿನಿಂದ ಇಷ್ಟದ ಬದುಕಿನತ್ತ ಸಾಗಿ : ಅಶೋಕ್ ನೆಕ್ರಾಜೆ
” ರೋಚಕತೆ ಸಮಾಜದ ಬದಲು ರಚನಾತ್ಮಕತೆಯ ಸಮಾಜದತ್ತ ಗಮನಹರಿಸಬೇಕಾಗಿರುವುದು ವಿದ್ಯಾರ್ಥಿಗಳ ಅಗತ್ಯತೆ ಮತ್ತು ಆದ್ಯತೆಯಾಗಬೇಕು. ರೀಲ್ಸ್ ಗಳತ್ತ ಮಾತ್ರ ನೋಡದೆ ರಿಯಲ್ ಬದುಕಿನತ್ತ ದೃಷ್ಟಿ ಬೇಕು ” ಎಂದು ಸುಳ್ಯ ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ ಹೇಳಿದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ಆಡಳಿತದ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ 2025–26ನೇ ಸಾಲಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಸಮರ್ಥ ನಾಯಕತ್ವಕ್ಕೆ ಸಮಯಪಾಲನೆ, ಗುರಿಯ ಸ್ಪಷ್ಟತೆ, ಸಂವೇದನಾಶೀಲತೆ ಅತ್ಯಗತ್ಯ. ಶಿಕ್ಷಣ ಮತ್ತು ಸಂಸ್ಕೃತಿಯ ಸಮನ್ವಯದಿಂದ ಯುವ ಜನಾಂಗದ ಪ್ರಗತಿ ಸಾಧ್ಯ ಎಂದು ಅವರು ಹೇಳಿದರು.
ಸಭಾಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿ ಸದಸ್ಯ ಹಾಗೂ ಕುಕ್ಕೆ ದೇವಳದ ವ್ಯವಸ್ಥಾಪನಾ ಸಮಿತಿಯ ಅಶೋಕ್ ನೆಕ್ರಾಜೆ ಮಾತನಾಡಿ, ನಮ್ಮ ಮತ್ತು ಮನೆಯವರ ಬದುಕಿನ ಕಷ್ಟಗಳ ನೆನಪು ನಮಗೆ ಬೇಕು. ಅವುಗಳನ್ನು ಇಷ್ಟದ ಬದುಕಾಗಿ ಉಜ್ವಲ ಭವಿಷ್ಯ ಪಡೆಯುವ ಗುರಿ ಬೇಕು. ವಿದ್ಯಾರ್ಥಿ ಸಂಘಗಳು ನಾಯಕತ್ವದ ಜ್ಞಾನ ಕಲಿಸುವ ಕೇಂದ್ರಗಳು ಎಂದರಲ್ಲದೆ, ಕಾಲೇಜಿನ ಮೂಲಸೌಕರ್ಯ ಸುಧಾರಣೆ ಮತ್ತು ಸಮಸ್ಯೆ ನಿವಾರಣೆಗೆ ನೂತನ ಸಮಿತಿ ಪೂರ್ಣ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.















ಕಾಲೇಜಿನಲ್ಲಿ ನಡೆದ ಪ್ರತಿಭಾ ಪ್ರದರ್ಶನ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಪ್ರತಿಭಾ ಪ್ರದರ್ಶನದ ತೀರ್ಪುಗಾರರಾದ ಮಾಜಿ ಧಾರ್ಮಿಕ ಪರಿಷತ್ ಸದಸ್ಯೆ ವಿಮಲಾ ರಂಗಯ್ಯ,
ಗ್ರಾ.ಪಂ.ಸದಸ್ಯೆ ಭಾರತಿ ದಿನೇಶ್, ಕೆ.ಎಸ್.ಎಸ್. ಕಾಲೇಜಿನ
ಕನ್ನಡ ಪ್ರಾಧ್ಯಾಪಕ ಉದಯಕುಮಾರ್ ಮಾತನಾಡಿದರು.
ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್ ಸಂದರ್ಭೋಚಿತವಾಗಿ ಮಾತನಾಡಿದರು. ವಿದ್ಯಾರ್ಥಿ ಸಂಘದ ಸಂಚಾಲಕ, ಉಪನ್ಯಾಸಕ ಜಯಪ್ರಕಾಶ್ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಸಾಂಸ್ಕೃತಿಕ ಸಂಘ ಸಂಚಾಲಕಿ, ಉಪನ್ಯಾಸಿ ರೇಖಾ ರಾಣಿ ಸೋಮಶೇಖರ್,
ವಿದ್ಯಾರ್ಥಿ ನಾಯಕ ಶ್ರೇಯಸ್ ಹಾಗೂ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ರಕ್ಷಾ ಸ್ವಾಗತಿಸಿದರು. ಯಶಸ್ವಿ ವಂದಿಸಿದರು.
ಪೂಜಾಶ್ರಿ ಕಾರ್ಯಕ್ರಮ ನಿರೂಪಿಸಿದರು.
ಉಪನ್ಯಾಸಕಿ ಶ್ರುತಿ ಅಶ್ವತ್ಥ್ ಸಹಕಾರ ನೀಡಿದರು.
ಸುದ್ದಿ ಚಾನೆಲ್ ಗೆ ಕೃತಜ್ಞತೆ ಸಲ್ಲಿಸಿದ ಪ್ರಾಂಶುಪಾಲರು
” ನಮ್ಮ ಕಾಲೇಜಿನಲ್ಲಿ ಈ ಬಾರಿ ಪ್ರವೇಶ ಬಯಸಿ ಅತಿ ಹೆಚ್ಚು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬಂದಿದ್ದಾರೆ. ಈ ಬಾರಿ ಪಿಯುಸಿ ಫಲಿತಾಂಶ ಬಂದಾಗ ಸುದ್ದಿ ಚಾನೆಲ್ ನವರು ನಮ್ಮ ಕಾಲೇಜಿಗೆ ಬಂದು ಮಾಡಿದ ಸಂದರ್ಶನ ಮತ್ತು ಸೊಗಸಾಗಿ ಪ್ರಸ್ತುತ ಪಡಿಸಿದ ರೀತಿಯೂ ಇದಕ್ಕೆ ಒಂದು ಕಾರಣ. ಇದಕ್ಕಾಗಿ ಸುದ್ದಿ ಚಾನೆಲ್ ಗೆ ಕೃತಜ್ಞತೆ ಸಲ್ಲಿಸುವುದಾಗಿ ಪ್ರಾಂಶುಪಾಲ ಸೋಮಶೇಖರ ನಾಯಕ್ ತನ್ನ ಭಾಷಣದಲ್ಲಿ ಹೇಳಿದರು.










