ಮನೋಜ್ ಕುಮಾರ್‌ಗೆ ಡಾಕ್ಟರೇಟ್ ಪದವಿ

0

ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ಎಸ್‌ಎಸ್‌ಪಿಯು ಕಾಲೇಜಿನ ಉಪನ್ಯಾಸಕ ಮನೋಜ್ ಕುಮಾರ್ ಬಿ.ಎಸ್ ಅವರು ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಮಂಗಳೂರು ವಿಶ್ವ ವಿದ್ಯಾನಿಲಯದ ಆಧೀನದ ಫಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಸ್ಮಾರಕ ಮಹಾವಿದ್ಯಾಲಯದ ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ.ತಿಮ್ಮಯ್ಯ ಟಿ.ಡಿ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಎಕಾಮಿಕ್ಸ್ ಆಫ್ ಅರಕನಟ್ ಕಲ್ಟಿವೇಷನ್ ವಿತ್ ಸ್ಪೆಷಲ್ ರೆಫರೆನ್ಸ್ ಟು ಸ್ಮಾಲ್ ಫಾರ್ಮರ್‍ಸ್ ಆಫ್ ದಕ್ಷಿಣ ಕನ್ನಡ ಡಿಸ್ಟ್ರಿಕ್ಟ್ ಎಂಬ ವಿಷಯದ ಕುರಿತಾಗಿ ಮಂಡಿಸಿದ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ.ಇವರು ಅಜ್ಜಾವರ ಗ್ರಾಮದ ಅತ್ಯಡ್ಕದ ದಿ.ಶ್ರೀಧರ್ ಮತ್ತು ಕಮಲಾಕ್ಷಿ ದಂಪತಿಗಳ ಪುತ್ರ.