ಪಂಜ: ಶ್ರೀ ಕಾಚುಕುಜುಂಬ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ- ಶ್ರಮದಾನ ಮೂಲಕ ಅಡಿಪಾಯ ಕಾಂಕ್ರಿಟೀಕರಣ

0


ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರ ಬಲಕ್ಯೆಬಂಟ ಕಾಚುಕುಜುಂಬ ದೈವದ ಮೂಲಸ್ಥಾನ ಗರಡಿ ಬೈಲು ನಲ್ಲಿ ನಿರ್ಮಾಣವಾಗುವ ಶ್ರೀ ಕಾಚು ಕುಜುಂಬ ದೈವದ ನೂತನ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗುತ್ತಿದದ್ದು ಜೂ.29 ರಂದು ಅಡಿಪಾಯಕ್ಕೆ ಕಾಂಕ್ರಿಟೀಕರಣ ಶ್ರಮದಾನ ಮೂಲಕ ನಡೆಯಿತು. ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪರಮೇಶ್ವರ ಬಿಳಿಮಲೆ, ಉಪಾಧ್ಯಕ್ಷ ಉಮೇಶ್ ಬುಡೆಂಗಿ,ಪೈಂದೋಡಿ ಶ್ರೀ ಸುಬ್ರಾಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಗೌಡ ಕುದ್ವ,ಪಂಬೆತ್ತಾಡಿ ಚಿಗುರು ಗೆಳೆಯರ ಬಳಗದ ಅಧ್ಯಕ್ಷ ಅಶ್ವಥ್ ಬಾಬ್ಲುಬೆಟ್ಟು, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸಂತೋಷ್ ರೈ ಪಲ್ಲತ್ತಡ್ಕ, , ಧರ್ಮಣ್ಣ ನಾಯ್ಕ ಗರಡಿ, ಶ್ರೀಮತಿ ಪವಿತ್ರ ಮಲ್ಲೆಟ್ಟಿ, ಶ್ರೀಮತಿ ಮಾಲಿನಿ ಕುದ್ವ, ಪಂಜ ಶ್ರೀ ಶಾರದಾಂಬಾ ಭಜನಾ ಮಂಡಳಿ ಅಧ್ಯಕ್ಷ ನಾಗಪ್ಪ ಗೌಡ ಪಂಜದಬೈಲು, ರಾಜೇಶ್ ಕುದ್ವ ಚಿಗುರು ಗೆಳೆಯರ ಬಳಗದ ಸದಸ್ಯರು ,ಮೊದಲಾದವರು ಉಪಸ್ಥಿತರಿದ್ದರು.