ಸಾಧಕ ವಿದ್ಯಾರ್ಥಿಗಳಿಗೆ, ಹಿರಿಯ ಸದಸ್ಯರಿಗೆ, ಗ್ರಾಮದ ಅತ್ಯುತ್ತಮ ನವೋದಯ ಸಂಘಕ್ಕೆ ಸನ್ಮಾನ ಕಾರ್ಯಕ್ರಮ
ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ, ಹಿರಿಯ ಸದಸ್ಯರಿಗೆ, ಗ್ರಾಮದ ಅತ್ಯುತ್ತಮ ನವೋದಯ ಸಂಘಕ್ಕೆ ಸನ್ಮಾನ ಕಾರ್ಯಕ್ರಮ ಇಂದು(ಜೂ. 29) ಸಂಘದ ಪ್ರಧಾನ ಕಚೇರಿಯ ಗೋಪಾಲಕೃಷ್ಣ ಗೌಡ ಕೇಪಳಕಜೆ ಸಭಾಭವನದಲ್ಲಿ ನಡೆಯಿತು.
ಮಹಾಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ವಿಷ್ಣು ಭಟ್ ಮೂಲೆತೋಟ ವಹಿಸಿದ್ದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವಿಷ್ಣು ಭಟ್ ರವರು ಸಂಘದ ಅಭಿವೃದ್ದಿಯನ್ನು ವಿವರಿಸಿ, ಈ ವರ್ಷಂತ್ಯಕ್ಕೆ 1544 ಜನ ಎ ಸದಸ್ಯರಿದ್ದಾರೆ. 2024-25ನೇ ವರ್ಷದ ಲಾಭಾಂಶ ರೂ. 61,40,073 ಹೊಂದಿದ್ದು, ಬಜೆಟಗಿಂತ 16 ಲಕ್ಷ ಹೆಚ್ಚುವರಿ ಆದಾಯ ಬಂದಿದ್ದು, ಸದಸ್ಯರಿಗೆ ಶೇ. 10 ದೇವಿಡೆಂಟ್ ನೀಡಲಿದ್ದೇವೆ ಎಂದು ಘೋಷಿಸಿದರು.















ವಾರ್ಷಿಕ ವರದಿಯನ್ನು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಂತೋಷ್ ಎನ್. ವಾಚಿಸಿದರು.


ವರದಿಯ ಮೇಲೆ ಚರ್ಚೆ ನಡೆಯುತ್ತಿದ್ದಾಗ ಯಶಸ್ವಿನಿ ಯೋಜನೆ ಎಲ್ಲಾ ಆಸ್ಪತ್ರೆಗಳಲ್ಲಿ ದೊರೆಯದ ಬಗ್ಗೆ ಸತೀಶ್ ಗುಡ್ಡನಮನೆ ಪ್ರಶ್ನಿಸಿದರು. ಈ ಬಗ್ಗೆ ಉತ್ತರಿಸಿದ ಅಧ್ಯಕ್ಷರು ಸರಕಾರ ನಮಗೆ ಯಶಸ್ವಿನಿ ಯೋಜನೆ ಮಾಡಬೇಕು ಎಂದು ಒತ್ತಡ ತಂದರೂ ನಾವು ಸದಸ್ಯರಿಗೆ ಒತ್ತಾಯ ಮಾಡುತ್ತಿಲ್ಲ. ಬೇಕಾದ ಸದಸ್ಯರು ಮಾತ್ರ ಮಾಡಿಸಿಕೊಳ್ಳುತ್ತಾರೆ ಎಂದರು. ಸದಸ್ಯರ ಸಾಂತ್ವನ ನಿಧಿ ಸೇವಾ ಬಿಂದು ಎಲ್ಲಾ ಸದಸ್ಯರಿಗೂ ನೀಡಲಾಗುತ್ತದ? ಎಂದು ಪ್ರಶ್ನಿಸಿದರು.
ಅದಕ್ಕಾಗಿ ಪ್ರತ್ಯೇಕ ಹಣ ಪಡೆಯುತ್ತಿಲ್ಲ. ಎ ವರ್ಗದ ಸದಸ್ಯರಿಗೆ ನೀಡುತ್ತಿದ್ದೇವೆ. ಸಿ ವರ್ಗದಲ್ಲಿದ್ದರುವ ಸದಸ್ಯರನ್ನು ಎ ವರ್ಗ ಮಾಡುತ್ತಿದ್ದೇವೆ ಎಂದರು.
ಬಳಿಕ ಅಧ್ಯಕ್ಷರು ಅಧ್ಯಕ್ಷಿಯಾ ಮಾತುಗಳನ್ನಾಡಿದರು.
ನಂತರ ಈ ಬಾರಿಯ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾ ಯಿತು. ಹಾಗೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ನವೋದಯ ಸಂಘಗಳನ್ನು ಗೌರವಿಸಲಾಯಿತು.










