ಎಲ್ಲಾ ಸಿಬ್ಬಂದಿಗಳಿಗೆ ರೋಲ್ ಮಾಡೆಲ್ ಆಗಿದ್ದವರು ಶುಭಾಶ್ಚಂದ್ರರು : ಗಣ್ಯರಿಂದ ವಿದಾಯಮಾತು


ನೆಲ್ಲೂರು ಕೆಮ್ರಾಜೆ ಪ್ರಾ. ಕೃ. ಪ. ಸ. ಸಂಘದಲ್ಲಿ ಸೇಲ್ಸ್ ಕಂ ಅಟೆಂಡರ್ ಆಗಿದ್ದ ಶುಭಾಶ್ಚಂದ್ರ ಕೇರಿಮೂಲೆಯವರು ಜೂ. 30ರಂದು ನಿವೃತ್ತಿಯಾಗಲಿದ್ದು ಅವರ ಬೀಳ್ಕೊಡುಗೆ ಸಮಾರಂಭವು ಇಂದು ನಡೆಯಿತು.
ನೆಲ್ಲೂರು ಕೆಮ್ರಾಜೆ ಪ್ರಾ. ಕೃ. ಪ. ಸ. ಸಂಘದ ಅಧ್ಯಕ್ಷರಾದ ವಿಷ್ಣು ಭಟ್ ಮೂಲೆತೋಟ ಅಧ್ಯಕ್ಷತೆ ವಹಿಸಿದ್ದರು.















ಶುಭಾಶ್ಚಂದ್ರರು ಪ್ರಾಮಾಣಿಕ ವ್ಯಕ್ತಿ. ಪಾದರಸದಂತಹ ಚುರುಕುತನ ಅವರದ್ದು. ಉಳಿದ ಸಿಬ್ಬಂದಿಗಳಿಗೆ ರೋಲ್ ಮಾಡೆಲ್ ಆಗಿ, ಹೊಸ ತಲೆಮಾರು ಸಿಬ್ಬಂದಿಗಳಿಗೆ ಸ್ಫೂರ್ತಿ ನೀಡುವ ವ್ಯಕ್ತಿ ಶುಭಾಶ್ಚಂದ್ರರು ಎಂದು ಬೀಳ್ಕೊಳ್ಳುತ್ತಿರುವ ಶುಭಾಶ್ಚಂದ್ರರ ಬಗ್ಗೆ ಗಣ್ಯರು ವಿದಾಯ ಮಾತುಗಳನ್ನಾಡಿದರು.
ಶುಭಾಶ್ಚಂದ್ರ ದಂಪತಿಗಳನ್ನು ಶಾಲು ಹೊದಿಸಿ, ಫಲ ತಂಬೂಲ ನೀಡಿ, ಸ್ಮರಣಿಕೆ, ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು.
ಇದೆ ಸಂದರ್ಭದಲ್ಲಿ ಅವರ ಹಿತೈಷಿಗಳು ಅವರನ್ನು ಸನ್ಮಾನಿಸಿ ಬೀಳ್ಕೊಟ್ಟರು.

ಅಧ್ಯಕ್ಷರಾದ ವಿಷ್ಣು ಭಟ್, ನಿರ್ದೇಶಕ ಹರೀಶ್ ಕಂಜಿಪಿಲಿ, ಉಮೇಶ್ ಪ್ರಭು, ನಿವೃತ್ತ ಸಿ. ಈ. ಓ. ಗಳಾದ ಸುಬ್ರಮಣ್ಯ ಭಟ್, ಜಗನ್ನಾಥ ಶೆಟ್ಟಿ ಉಬರಡ್ಕ, ನೆಲ್ಲೂರು ಕೆಮ್ರಾಜೆ ಮಾಜಿ ಅಧ್ಯಕ್ಷ ಈಶ್ವರಪ್ಪ ಹರ್ಲಡ್ಕ ಮತ್ತಿತರರು
ವಿದಾಯ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ಸಿ ಇ ಓ ಸಂತೋಷ್, ಉಪಾಧ್ಯಕ್ಷರಾದ ಜಯಪ್ರಸಾದ್ ಸುಳ್ಳಿ ಹಾಗೂ ನಿರ್ದೇಶಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿರ್ದೇಶಕ ಶುಭಕರ ನಾಯಕ್ ವಂದಿಸಿದರು.
ಶಿಕ್ಷಕ ಮುರಳಿಧರ ಪುನುಕುಟ್ಟಿ ಕಾರ್ಯಕ್ರಮ ನಿರೂಪಿಸಿದರು.










