ಶೈಲೇಶ್ ಅಂಬೆಕಲ್ಲುಗೆ ನಿರೀಕ್ಷಣಾ ಜಾಮೀನು

0

ಸ್ವಸಹಾಯ ಸಂಘದ ಮಹಿಳೆಯನ್ನು ಮನೆಗೆ ಕರೆದೊಯ್ದು ಅನುಚಿತವಾಗಿ ವರ್ತಿಸಿ ಆಕೆಯ ಮಾನಭಂಗ ನಡೆಸಿದರೆಂಬ ಕೇಸಿಗೆ ಒಳಗಾಗಿ ತಲೆಮರೆಸಿಕೊಂಡಿದ್ದ ದೇವಚಳ್ಳ ಗ್ರಾ.ಪಂ. ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ರವರಿಗೆ ಪುತ್ತೂರಿನ 5 ನೇ ಹೆಚ್ಚುವರಿ ತ್ವರಿತಗತಿ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವುದಾಗಿ ತಿಳಿದುಬಂದಿದೆ.
ದೇವಚಳ್ಳ ಗ್ರಾಮದ ಸ್ವಸಹಾಯ ಸಂಘದ ಸೇವಾದೀಕ್ಷಿತೆಯೊಬ್ಬರನ್ನು ಮಾತನಾಡಲಿಕ್ಕಿದೆಯೆಂದು ಮನೆಗೆ ಕರೆದೊಯ್ದು ಮೈಕೈ ಮುಟ್ಟಿ ಅನುಚಿತವಾಗಿ ವರ್ತಿಸಿದರೆಂದು ಸೇವಾದೀಕ್ಷಿತೆ ಸುಬ್ರಹ್ಮಣ್ಯ ಪೋಲೀಸರಿಗೆ ನೀಡಿದ ದೂರಿನನ್ವಯ ಶೈಲೇಶ್ ಅಂಬೆಕಲ್ಲು ಮೇಲೆ ಮಾನಭಂಗದ ಕೇಸು ದಾಖಲಾಗಿತ್ತು.
ಕೇಸು ದಾಖಲಾದ ಜೂ.18 ರಿಂದ ತಲೆಮರೆಸಿಕೊಂಡ ಶೈಲೇಶ್ ಅಂಬೆಕಲ್ಲು ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದರು. ಜೂ.28 ರಂದು ನ್ಯಾಯಾಲಯ ನಿರೀಕ್ಷಣಾ ಜಾಮೀನು ಆದೇಶ ಮಾಡಿರುವುದಾಗಿ ತಿಳಿದುಬಂದಿದೆ.