ಸುಳ್ಯ ಲಯನ್ಸ್ ಕ್ಲಬ್ ಇದರ ನೂತನ ಅಧ್ಯಕ್ಷ ಲಯನ್ ದೀಪಕ್ ಕುತ್ತಮೊಟ್ಟೆ ತಂಡಕ್ಕೆ ಪದಗ್ರಹಣ – ಚಾರ್ಟರ್ ನೈಟ್ ಕಾರ್ಯಕ್ರಮ

0

ಪದ ಪ್ರಧಾನ ನೆರವೇರಿಸಿದಜಿಲ್ಲಾಉಪರಾಜ್ಯಪಾಲ ಲಯನ್ ಗೋವರ್ಧನ್ ಶೆಟ್ಟಿ

ಸುಳ್ಯ ಲಯನ್ಸ್ ಕ್ಲಬ್ ಇದರ ಮುಂದಿನ 2025-26 ನೇ ಸಾಲಿನ ನೂತನಪದಾಧಿಕಾರಿಗಳಿಗೆ ಪದ ಪ್ರಧಾನ ಹಾಗೂ ಚಾರ್ಟರ್ ನೈಟ್ ಕಾರ್ಯಕ್ರಮ ಜೂ.29 ರಂದು ಲಯನ್ಸ್ ಸೇವಾ ಸದನದಲ್ಲಿ ನಡೆಯಿತು.

ಸಂಜೆ ನಡೆದ ಸಮಾರಂಭದ ಅಧ್ಯಕ್ಷತೆಯನ್ನು
ಕ್ಲಬ್ ಅಧ್ಯಕ್ಷ ಲಯನ್ ರಾಮಕೃಷ್ಣ ರೈ ಯವರು ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ನಿಕಟ ಪೂರ್ವ ಜಿಲ್ಲಾ ಗವರ್ನರ್ ಲಯನ್ ಎಂ.ಬಿ.ಸದಾಶಿವ ರವರು ದೀಪ ಪ್ರಜ್ವಲಿಸಿ‌ ಉದ್ಘಾಟಿಸಿದರು.

ವೇದಿಕೆಯಲ್ಲಿ ಜಿಲ್ಲಾ ಉಪ ರಾಜ್ಯಪಾಲರಾದ ಲಯನ್ ಗೋವರ್ಧನ್ ಶೆಟ್ಟಿ, ಲಯನ್ ಸುಪ್ರೀತಾ ಗೋವರ್ಧನ್ ಶೆಟ್ಟಿ,
ಲಯನ್ ವಲಯಾಧ್ಯಕ್ಷೆ
ಲಯನ್ ರೂಪಾಶ್ರೀ ಜೆ.ರೈ, ಪ್ರಾಂತೀಯ ಅಧ್ಯಕ್ಷ ಲಯನ್ ಗಂಗಾಧರ ರೈ,ಕಾರ್ಯದರ್ಶಿ ಲಯನ್ ರಾಮಚಂದ್ರ ಪಲ್ಲತಡ್ಕ, ಐ.ಪಿ.ಪಿ
ಲಯನ್ ವೀರಪ್ಪ ಗೌಡ ಕಣ್ಕಲ್ ,ಖಜಾಂಜಿ ಲಯನ್ ರಮೇಶ್ ಶೆಟ್ಟಿ
ಉಪಸ್ಥಿತರಿದ್ದರು.

ಮುಂದಿನ ಸಾಲಿನ ನೂತನಪದಾಧಿಕಾರಿಗಳಿಗೆ ಜಿಲ್ಲಾ ಉಪ ರಾಜ್ಯಪಾಲರಾದ ಲಯನ್ ಗೋವರ್ಧನ್ ಶೆಟ್ಟಿ ಯವರು ಪದ ಪ್ರಧಾನ ನೆರವೇರಿಸಿ ಶುಭ ಹಾರೈಸಿದರು.

ಬಳಿಕ ಕ್ಲಬ್ ನ ನೂತನ ಅಧ್ಯಕ್ಷ ಲಯನ್ ದೀಪಕ್ ಕುತ್ತಮೊಟ್ಟೆ ಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವು ಮುಂದುವರಿಯಿತು.

ಈ ಸಂದರ್ಭದಲ್ಲಿ ಕ್ಲಬ್ಬಿಗೆ
ನೂತನ ಸದಸ್ಯರನ್ನು ಸೇರ್ಪಡೆ ಗೊಳಿಸಲಾಯಿತು.

ಲಯನ್ ಕೆ.ಸಿ.ಕರುಂಬಯ್ಯ ಮತ್ತು ಲಯನ್ ರೀಟಾ ಕರುಂಬಯ್ಯ ದಂಪತಿಯವರಿಂದ ಕೊಡಮಾಡಿದ ಉಬರಡ್ಕ ಗ್ರಾಮದ ಕು.ಉಷಾ ಬಿ ಎಂಬ ವಿದ್ಯಾರ್ಥಿನಿಗೆ ಪಿಸಿಯೋಥೆರಪಿ ವಿದ್ಯಾಭ್ಯಾಸಕ್ಕಾಗಿ ವಾರ್ಷಿಕ ರೂ.1.25 ಲಕ್ಷದಂತೆ 4 ವರ್ಷಗಳ ಶೈಕ್ಷಣಿಕ ದತ್ತು ಪತ್ರವನ್ನು ಕ್ಲಬ್ ವತಿಯಿಂದ ವಿತರಿಸಲಾಯಿತು.

ಸಂಸ್ಥೆಯ ವತಿಯಿಂದ ಜಿಲ್ಲಾ ಉಪ ರಾಜ್ಯಪಾಲರಾದ ಲಯನ್ ಗೋವರ್ಧನ್ ಶೆಟ್ಟಿ ದಂಪತಿಯವರನ್ನು ಸನ್ಮಾನಿಸಲಾಯಿತು.


ಕಳೆದ ಸಾಲಿನ ನಿರ್ಗಮನಾಧ್ಯಕ್ಷರನ್ನು ಹಾಗೂ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಕಾರ್ಯದರ್ಶಿ ಲಯನ್ ಮಲ್ಲಿಕಾರ್ಜುನ ಪ್ರಸಾದ್, ಕೋಶಾಧಿಕಾರಿ ಲಯನ್ ಜತ್ತಪ್ಪ ರೈ ಉಪಸ್ಥಿತರಿದ್ದರು.

ಲಯನ್ ಚಂದ್ರಿಕಾ ಪ್ರಾರ್ಥಿಸಿದರು.
ಲಯನ್ ರಾಮಕೃಷ್ಣ ರೈ ಸ್ವಾಗತಿಸಿದರು.
ಲಯನ್ ಭಾಗೀರಥಿ ಪಡ್ಡಂಬೈಲು ರಾಜ್ಯಪಾಲರ ಪರಿಚಯ ವಾಚಿಸಿದರು.
ಲಯನ್ ಶಿವರಾಮ ಕೇನಾಜೆ
ನೂತನ ಪದಾಧಿಕಾರಿಗಳ ಪರಿಚಯ ವಾಚಿಸಿದರು. ಲಯನ್ ರಮಿತಾ ಜಯರಾಮ್ ಸದಸ್ಯರ ಪರಿಚಯ ಮಾಡಿದರು. ಲಯನ್ ಮಲ್ಲಿಕಾರ್ಜುನ ಪ್ರಸಾದ್ ವಂದಿಸಿದರು. ಲಯನ್ ಗೀತಾ ಶಶಿಧರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು
ಮತ್ತು ಸದಸ್ಯರು ಭಾಗವಹಿಸಿದರು. ಆಗಮಿಸಿದ ಎಲ್ಲರಿಗೂ ರಾತ್ರಿ ಸಹಭೋಜನದ ವ್ಯವಸ್ಥೆ ಮಾಡಲಾಗಿತ್ತು.