ಅಂಜಲಿ ಮಾಂಟೇಸರಿ ಶಾಲೆಯಲ್ಲಿ ಪೋಷಕರ ಸಮಲೋಚನ ಸಭೆ

0

ಅಂಜಲಿ ಮಾಂಟೇಸರಿ ಶಾಲೆಯಲ್ಲಿ ಪೋಷಕರ ಸಮಲೋಚನ ಸಭೆ 2025 ನಡೆಸಲಾಯಿತು. ಈ ಕಾರ್ಯಕ್ರಮವನ್ನು ಸುಳ್ಯದ ಖ್ಯಾತ ಆಪ್ತ ಸಮಾಲೋಚಕರಾದ ಶ್ರೀಮತಿ ಮೀನಾ ಕುಮಾರಿಯವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ” ಪ್ರಸ್ತುತ ಮಕ್ಕಳನ್ನು ಬೆಳೆಸುವಲ್ಲಿ ಪೋಷಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸಿದರು”. ನಂತರ ಸಂಸ್ಥೆಯ ಸಂಚಾಲಕಿ ಶ್ರೀಮತಿ ಗೀತಾಂಜಲಿ ಅವರು ಮಾಂಟೇಸರಿ ವಿಧಾನದ ಬಗ್ಗೆ ಪೋಷಕರಿಗೆ ತಿಳಿಸಿದರು. ಸಂಸ್ಥೆಯ ಅಧ್ಯಕ್ಷರಾದ ಶುಭಕರ ರವರು ಸಂಸ್ಥೆಯ ಮುಂದಿನ ಯೋಜನೆ ಗಳ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಲೆಯ ಸಹಾಯಕಿಯರು ಆದ ಕುಮಾರಿ ಸುಕನ್ಯಾ ಹಾಗೂ ಕುಮಾರಿ ದೀಕ್ಷಾ ರವರು ಪ್ರಾರ್ಥಿಸಿ, ಶಿಕ್ಷಕರಾದ ಶ್ರೀಮತಿ ರೂಪಾ ರವರು ಸ್ವಾಗತಿಸಿ, ಶ್ರೀಮತಿ ನಿರ್ಮಲ ಅವರು ವಂದಿಸಿದರು. ನಿರೂಪಣೆಯನ್ನು ಶ್ರೀಮತಿ ಫಾಬಿದಾ ರವರು ನಡಸಿಕೊಟ್ಟರು. ಎಲ್ಲಾ ಪೋಷಕರು ಮಾಂಟೇಸರಿ ಮೆಟೀರಿಯಲ್ಸ್ ಅನ್ನು ವೀಕ್ಷಸಿದರು