ಐವರ್ನಾಡು ಗ್ರಾಮ ಪಂಚಾಯತ್ ಪ್ರಥಮ ಸುತ್ತಿನ ಗ್ರಾಮ ಸಭೆ

0

ಮೂಲಭೂತ ಸೌಕರ್ಯಗಳು, ಎಂ.ಎಸ್.ಐ.ಎಲ್.ಶಾಪ್ ನಿಂದ ಆಗುವ ತೊಂದರೆ ಬಗ್ಗೆ ಚರ್ಚೆ

ಮನೆ ನಿವೇಶನ ಜಾಗದ ಬಗ್ಗೆ ಇಲಾಖೆ ವಿರುದ್ದ ತೀವ್ರ ಅಸಮಾಧಾನ

ಐವರ್ನಾಡು ಗ್ರಾಮ ಪಂಚಾಯತ್ 2025 -26 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಲೀಲಾವತಿ ಕುತ್ಯಾಡಿಯವರ ಅಧ್ಯಕ್ಷತೆಯಲ್ಲಿ ಜೂ.30 ರಂದು ಗ್ರಾಮ ವಿಕಾಸ ಸಭಾಭವನದಲ್ಲಿ ನಡೆಯಿತು.
ಸುಳ್ಯ ಶಿಶು ಅಭಿವೃದ್ದಿ ಯೋಜನಾಧಿಕಾರಿ ಶ್ರೀಮತಿ ಶೈಲಜಾರವರು ನೋಡೆಲ್ ಅಧಿಕಾರಿಯಾಗಿದ್ದರು.


ಪಿಡಿಒ ಶ್ಯಾಮ್ ಪ್ರಸಾದ್ ಸ್ವಾಗತಿಸಿ,ಪ್ರಾಸ್ತಾವಿಕ ಮಾತನಾಡಿ,ವರದಿ ಮಂಡಿಸಿದರು.
ವರದಿ ಬಗ್ಗೆ,ವಿದ್ಯುತ್, ಲೈನ್ ಮೆನ್ ಸಮಸ್ಯೆ, ರಸ್ತೆ ಬದಿ ತ್ಯಾಜ್ಯ,ರಸ್ತೆ ಬದಿ ಇರುವ ಎಂ.ಎಸ್.ಐ.ಎಲ್ ನಿಂದ ಆಗುವ ತೊಂದರೆ ,ಮನೆ ನಿವೇಶನ ಜಾಗದ ಬಗ್ಗೆ, ರಸ್ತೆ ಬಗ್ಗೆ ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳ ಬಗ್ಗೆ ತೀವ್ರ ಚರ್ಚೆಗಳು ನಡೆದವು.
ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು.
ಪಂಚಾಯತ್ ಸಿಬ್ಬಂದಿಗಳು ಪ್ರಾರ್ಥಿಸಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ,ಗ್ರಾ.ಪಂ.ಸದಸ್ಯರು ಉಪಸ್ಥಿತರಿದ್ದರು.
ಸಿಬ್ಬಂದಿ ವರ್ಗದವರು ಸಹಕರಿಸಿದರು.

ಬೆಳ್ಳಾರೆ ಪ್ರಾ.ಆ.ಕೇಂದ್ರದ ವತಿಯಿಂದ ಬಿ.ಪಿ., ಶುಗರ್ ಉಚಿತ ತಪಾಸಣೆ

ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಗ್ರಾಮ ಸಭೆಗೆ ಆಗಮಿಸಿದ ಗ್ರಾಮಸ್ಥರ ಬಿ.ಪಿ.,ಶುಗರ್ ಉಚಿತವಾಗಿ ತಪಾಸಣೆ ಮಾಡಲಾಯಿತು.
ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ರಮ್ಯ, ಸಮುದಾಯ ಆರೋಗ್ಯಾಧಿಕಾರಿ ಶ್ರೀಮತಿ ವೀಣಾ ರವರು ತಪಾಸಣಾ ನಡೆಸಿದರು.
ಸಾರ್ವಜನಿಕರು ಸದುಪಯೋಗಪಡಿಸಿಕೊಂಡರು.