















ಎಡಮಂಗಲ ರೈಲ್ವೆ ನಿಲ್ದಾಣ ರಸ್ತೆ ತೀರಾ ಹದಗೆಟ್ಟು ಹೊಂಡಮಯವಾಗಿ ನೀರು ತುಂಬಾ ರಸ್ತೆಯಲ್ಲಿ ಹರಿಯುತ್ತಿದ್ದು ನಡೆದಾಡಲು ಮತ್ತು ವಾಹನ ಸಂಚಾರಕ್ಕೆ ತೊಡಕುಂಟಾಗಿತ್ತು. ಪ್ರತಿ ದಿನ ಈ ರಸ್ತೆಯಲ್ಲಿ ತೆರಳುವವರು ಲಗ್ಗೆಜ್ ತಲೆ ಹೊರೆಯಲ್ಲಿ ಸಾಗಬೇಕು. ಊರಿನವರು ಪಂಚಾಯತ್ಗೆ ಮತ್ತು ರೈಲ್ವೆಯರಿಗೆ ತಿಳಿಸಿಯೂ ಪ್ರಯೋಜನವಿಲ್ಲ ಎಂದು ರಸ್ತೆಯ ಪಲಾನುಭವಿಗಳು ಸೇರಿ ಜೂನ್ ೨೯ರಂದು ಶ್ರಮದಾನದ ಮೂಲಕ ರಸ್ತೆ ದುರಸ್ತಿ ಪಡಿಸಿದರು. ತಂಡದಲ್ಲಿ ಕುಶಾಲಪ್ಪ ನಾಯ್ಕ್ ದೇರಳ, ಜೀವೇಂದ್ರ ಕಾಯತಿಮಾರ್, ರವೀಂದ್ರ ನಾಯ್ಕ ದೇರಳ, ಕೇಶವ ನಡುಬೈಲು, ಕುಶಾಲಪ್ಪ ನಾಯ್ಕ್ ದಡ್ಡು, ತಿಮ್ಮಪ್ಪ ದೇರಳ, ಭಾಗವಹಿಸಿದ್ದರು. (ಎ ಎಸ್ ಎಸ್ ಅಲೆಕ್ಕಾಡಿ)










