ಅಡ್ಪಂಗಾಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯ ಪೋಷಕರ ಸಭೆ ಮತ್ತು ಎಸ್. ಡಿ ಎಂ. ಸಿ. ಸದಸ್ಯರ ಆಯ್ಕೆ ಸಭೆ ಜೂ 30 ರಂದು ನಡೆಯಿತು.
ಈ ಸಭೆಯಲ್ಲಿ ಮಕ್ಕಳ ಕಲಿಕೆ ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ಪೋಷಕರ ಮತ್ತು ಶಿಕ್ಷಕರ ಪಾತ್ರದ ಬಗ್ಗೆ ಸಂವಾದ ನಡೆಸಲಾಯಿತು.















ಮತ್ತು ಸುಂದರ ಭಾರತ್ ಪ್ರತಿಷ್ಠಾನದಿಂದ ಹೊದಗಿಸಲಾದ ನೋಟ್ ಪುಸ್ತಕ ವಿತರಿಸಲಾಯಿತು.
ಬಳಿಕ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಅಶ್ರಫ್ ಸ-ಅದಿಯವರ ರಾಜಿನಾಮೆಯಿಂದ ತೆರವಾದ ಅಧ್ಯಕ್ಷರ ಸ್ಥಾನಕ್ಕೆ ನೂತನ ಅಧ್ಯಕ್ಷರಾಗಿ ಅಬ್ಬಾಸ್ ಎ ಬಿ ಯವರನ್ನು ಆಯ್ಕೆ ಮಾಡಲಾಯಿತು. ಅಲ್ಲದೆ ಅಬೂಬಕ್ಕರ್ ಸಿದ್ದಿಕ್, ಮಹಮ್ಮದ್ ಎ ಬಿ ಮತ್ತು ಶ್ರೀಮತಿ ಸಫುವ ರವರು ನೂತನವಾಗಿ ಸಮಿತಿಗೆ ಸದಸ್ಯರುಗಳಾಗಿ ಸೇರಿಕೊಂಡರು.
ಈ ಸಂಧರ್ಭದಲ್ಲಿ ಶಾಲಾ ಎಸ್. ಡಿ ಎಂ ಸಿ ಉಪಾಧ್ಯಕ್ಷೆ ಶ್ರೀಮತಿ ರಂಮ್ಲ, ಜಿಲ್ಲಾ ಎಸ್ ಡಿ ಎಂ ಸಿ ಸಮನ್ವಯ ಸಮಿತಿ ಸದಸ್ಯರಾದ ಶೌಕತ್ ಅಲಿ, ಗ್ರಾಮ ಪಂಚಾಯತ್ ಸದಸ್ಯರಾದ ರಾಹುಲ್ ಅಡ್ಪಂಗಾಯ, ಪ್ರಭಾರ ಮುಖ್ಯಶಿಕ್ಷಕಿ ಶ್ರೀಮತಿ ಸುರೇಖಾ ರೈ. ಡಿ. ಹಾಗೂ ಅಧ್ಯಾಪಕ ವೃಂದದವರು ಮತ್ತು ಪೋಷಕರು ಉಪಸ್ಥಿತರಿದ್ದರು.










