














ಶ್ರೀ ಬಸವರಲಿ ಯೋಗ ಪ್ರತಿಷ್ಠಾನ, ಪೈಲ್ವಾನ್ ಯಜಮಾನ್ ‘ಶ್ರೀ ಬಸವರಾಜು’ ಅವರ ಸ್ಮರಣಾರ್ಥ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ದ್ವಿತೀಯ ವರ್ಷದ ರಾಜ್ಯ ಮಟ್ಟದ ಮುಕ್ತ ಯೋಗಾಸನ ಸ್ಪರ್ಧೆ ಮೈಸೂರು ನಲ್ಲಿ 29 ಜೂನ್ 2025 ಆದಿತ್ಯವಾರ ದಂದು ಆಯೋಜಿಸಲಾಗಿತ್ತು. 10 ವರ್ಷದ ಒಳಗಿನ ಬಾಲಕರ ವಿಭಾಗದಲ್ಲಿ ವಿಧಾತ್ ಗೌಡ. ಎಂ. ಟಿ. ದ್ವಿತೀಯ ಸ್ಥಾನ, 10 ವರ್ಷದ ಒಳಗಿನ ಬಾಲಕಿಯರ ವಿಭಾಗದಲ್ಲಿ ಅಕ್ಷಯ ಬಾಬ್ಲುಬೆಟ್ಟು. ತೃತೀಯ ಸ್ಥಾನ, 15 ರಿಂದ 18 ವರ್ಷದ ಬಾಲಕಿಯರ ವಿಭಾಗದಲ್ಲಿ ಕ್ಷಮ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಇವರು ಸುಳ್ಯದ ನಿರಂತರ ಯೋಗ ಕೇಂದ್ರದ ಶಿಕ್ಷಕರಾದ ಶರತ್ ಮರ್ಗಿಲಡ್ಕರವರ ಜೊತೆ ಮಾರ್ಗದರ್ಶನ ಪಡೆಯುತ್ತಿದ್ದಾರೆ.










