ಯಂ.ಆರ್.ಪಿ.ಯಲ್ 20 ಲಕ್ಷ .ರೂ. ಅನುದಾನದಲ್ಲಿ ಸುಸಜ್ಜಿತ ಶೌಚಾಲಯ ನಿರ್ಮಾಣ
ಶಾಲೆಗೆ ಅವಶ್ಯಕತೆ ಇದ್ದ ಸುಸಜ್ಜಿತ ಶೌಚಾಲಯ-ಕು.ಭಾಗೀರಥಿ ಮುರುಳ್ಯ
ಪಂಜ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಂ.ಆರ್ ಯ.ಪಿ.ಎಲ್, ಸಿ ಎಸ್.ಆರ್ 20 ಲಕ್ಷ ರೂಪಾಯಿ ಅನುದಾನದಲ್ಲಿ ನೂತನವಾಗಿ ನಿರ್ಮಿಸಿರುವ ಶೌಚಾಲಯ ಉದ್ಘಾಟನಾ ಕಾರ್ಯಕ್ರಮ ಜು.2 ರಂದು ನಡೆಯಿತು.

ಉದ್ಘಾಟನಾ ಕಾರ್ಯಕ್ರಮ ನಡೆಯಿತು.ಶಾಸಕಿ ಕು.ಭಾಗೀರಥಿ ಮುರುಳ್ಯ ಉದ್ಘಾಟಿಸಿ ಮಾತನಾಡಿ
“ಈ ಶಾಲೆಗೆ ಅತೀ ಅವಶ್ಯಕತೆ ಇದ್ದ ಸುಸಜ್ಜಿತ ಶೌಚಾಲಯ ನಿರ್ಮಾಣವಾಗಿದೆ.ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಮೂಡಿ ಬನ್ನಿ. “ಎಂದು ಹೇಳಿದರು.
ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಜಳಕದಹೊಳೆ ಸಭಾಧ್ಯಕ್ಷತೆ ವಹಿಸಿದ್ದರು.ಎಂ.ಆರ್ .ಪಿ. ಎಲ್ ಕಾರ್ಯಾಚರಣೆ ವಿಭಾಗದ ಮುಖ್ಯಸ್ಥ ಪ್ರದೀಪ್ ಕುಮಾರ್, ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಾರಾಯಣ ಕೃಷ್ಣನಗರ, ಸದಸ್ಯರಾದ ಚಂದ್ರಶೇಖರ ದೇರಾಜೆ, ಲಿಖಿತ್ ಪಲ್ಲೋಡಿ ಹಾಗೂ ಎಸ್. ಡಿ. ಎಂ .ಸಿ ಅಧ್ಯಕ್ಷ ಲಿಗೋಧರ ಆಚಾರ್ಯ, ಸಿ.ಆರ್. ಪಿ ಜಯಂತ್, ಮುಖ್ಯ ಗುರುಗಳು ಶ್ರೀಮತಿ ಲೀಲಾಕುಮಾರಿ , ಎಸ್. ಡಿ.ಎಂ.ಸಿ ಉಪಾಧ್ಯಕ್ಷೆ ಶ್ರೀಮತಿ ಸೌಮ್ಯಶ್ರೀ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ಎಂ.ಆರ್ .ಪಿ. ಎಲ್ ಕಾರ್ಯಾಚರಣೆ ವಿಭಾಗದ ಮುಖ್ಯಸ್ಥ ಪ್ರದೀಪ್ ಕುಮಾರ್ ಮತ್ತು ಶೌಚಾಲಯ ಕಟ್ಟಡ ನಿರ್ಮಾಣದ ಗುತ್ತಿಗೆದಾರ ಶಬೀರ್ ಯಂ.ಎಸ್ ಬಾಳಿಲ ರವರನ್ನು ಸನ್ಮಾನಿಸಲಾಯಿತು.
















ಕಾರ್ಯಕ್ರಮದಲ್ಲಿ ಮುಖ್ಯ ಗುರುಗಳು ಶ್ರೀಮತಿ ಲೀಲಾಕುಮಾರಿ ಸ್ವಾಗತಿಸಿದರು. ತೀರ್ಥಾನಂದ ಕೊಡೆಂಕಿರಿ ನಿರೂಪಿಸಿದರು.
ಎಸ್.ಡಿ.ಎಂ.ಸಿ ನಿಕಟಪೂರ್ವಾಧ್ಯಕ್ಷ
ಸೋಮಶೇಖರ ನೇರಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಡಿ.ಎಂ.ಸಿ ಅಧ್ಯಕ್ಷ ಲಿಗೋಧರ ಆಚಾರ್ಯ ವಂದಿಸಿದರು.










