ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೇಶನ್ ಸುಳ್ಯ ತಾಲೂಕು ಸಮಿತಿ ವತಿಯಿಂದ ತಹಶೀಲ್ದಾರರಿಗೆ ಮನವಿ

0

ಮರಳು ಮತ್ತು ಕೆಂಪು ಕಲ್ಲು ಸರಾಗವಾಗಿ ಬಳಕೆದಾರರಿಗೆ ಸಿಗುವಂತೆ ಕರಾವಳಿ ಮರಳು ನೀತಿ ರೂಪಿಸಲು ಒತ್ತಾಯ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಹಾಗೂ ಕೆಂಪು ಕಲ್ಲು ಗಣಿಗಾರಿಕೆಗೆ ಅಧಿಕಾರಿಗಳು ಸಂಪೂರ್ಣ ನಿಷೇದ ಹೇರಿರುವುದು ಸರಿಯಲ್ಲ.ಅಧಿಕೃತವಾಗಿ ಮರಳು ಮತ್ತು ಕೆಂಪು ಕಲ್ಲು
ತೆಗೆಯಲು ಅವಕಾಶ ಮಾಡಿ ಕೊಡಬೇಕು ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೇಷನ್ ಸುಳ್ಯ ಸಮಿತಿ ವತಿಯಿಂದ ಜು. 2 ರಂದು ಸುಳ್ಯ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ರವರಿಗೆ ಮನವಿಯನ್ನು ನೀಡಿದೆ.

ಮನವಿಯಲ್ಲಿ ಉಲ್ಲೇಖಿಸಿರುವ ಸಮಿತಿ ಯವರು ‘ದ ಕ ಜಿಲ್ಲೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದ ಕೆಂಪು ಕಲ್ಲು ಮತ್ತು ಮರಳು ಗಣಿಗಾರಿಯನ್ನು ಅಧಿಕಾರಿಗಳು ನಿಯಂತ್ರಣ ಮಾಡಿರುವುದು ಸ್ವಾಗ ತಾರ್ಹ. ಆದರೆ ಅಧಿಕಾರಿಗಳು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳವುದನ್ನು ಫೆಡರೇಶನ್ ತೀವ್ರವಾಗಿ ವಿರೋಧಿಸುತ್ತದೆ.
ಕೆಂಪು ಕಲ್ಲು ಮತ್ತು ಮರಳು ನಿಷೇಧದಿಂದ ತಾಲೂಕಿನಲ್ಲಿ ಕಟ್ಟಡ ಮನೆ ನಿಮಾಣ ಸೇರಿದಂತೆ ಎಲ್ಲಾ ರೀತಿಯ ನಿರ್ಮಾಣ ಕಾಮಗಾರಿಗಳು ಸ್ಥಗಿತವಾಗಿದ್ದು,ಈ ರೀತಿಯ ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ಅಧಿಕೃತ ಯೋಜನೆಗಳಿಗೆ ತೊಂದರೆಗಳು ಆಗದ ಹಾಗೆ ಕ್ರಮ ಕೈಗೊಳ್ಳಬೇಕು.
ಪಂಚಾಯತ್ ವ್ಯಾಪ್ತಿಯಲ್ಲಿ ಪಂಚಾಯತ್ ಗಳಿಂದಲೇ ಅಧಿಕೃತವಾಗಿ ಮರಳು ದೊರೆಯಬೇಕು.
ಅಧಿಕೃತ ಮರಳು ಮತ್ತು ಕೆಂಪು ಕಲ್ಲು ಪೂರೈಕೆ ಆಗದೆ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರು ತೀವ್ರವಾದ ಸಮಸ್ಯೆಗಳನ್ನು ಎದುರಿಸುತ್ತದ್ದಾರೆ.ಅವರ ಜೀವನ ನಿರ್ವಹಣೆ ಅತ್ಯಂತ ಕಷ್ಟಕರವಾಗಿದೆ.ಆದುದರಿದ ಸರಕಾರ ಶೀಘ್ರವಾಗಿ ಮಧ್ಯ ಪ್ರವೇಶಿಸಿ ಸ್ಥಳೀಯ ಆಡಳಿತದಿಂದಲೇ ತಾಲೂಕು ವ್ಯಾಪ್ತಿಯಲ್ಲಿ ಅಧಿಕೃತವಾಗಿ ಮತ್ತು ಸಾಂಪ್ರದಾಯಕ ವಾಗಿ ಕೆಂಪು ಕಲ್ಲು ಮತ್ತು ಮರಳು ಗಣಿಗಾರಿಕೆ ನಡೆಸಲು ಕ್ರಮ ಕೈಗೊಳ್ಳಬೇಕು. ಎಲ್ಲರಿಗೂ ಕಡಿಮೆ ದರದಲ್ಲಿ ಸರಳವಾಗಿ ಮತ್ತು ಸರಾಗವಾಗಿಮರಳು ಪೂರೈಕೆ ಆಗುವಂತೆ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರಿಗೆ ಉದ್ಯೋಗ ಅವಕಾಶಗಳು ಸಿಗುವಂತೆ ಶೀಘ್ರ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ನೀಡಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಈ ಸಂಧರ್ಭದಲ್ಲಿ ತಾಲೂಕು ಸಮಿತಿಯ ಅಧ್ಯಕ್ಷ ವಿಶ್ವನಾಥ ನೆಲ್ಲಿಬಂಗಾರಡ್ಕ, ಕಾರ್ಯದರ್ಶಿ ವಸಂತ ಪೆಲ್ತಡ್ಕ,ಸದಸ್ಯರುಗಳಾದ ನಾಗರಾಜ ಮೇಸ್ತ್ರಿ ಜಯನಗರ, ಅಬೂಬಕ್ಕರ್ ಜಟ್ಟಿಪಳ್ಳ, ಶಿಲ್ಪಾಚಾರಿ, ಹಾಗೂ ಜಗದೀಶ್ ಉಪಸ್ಥಿತರಿದ್ದರು.