ಗಾಂಧಿನಗರ ಪಂಚಾಯತ್ ವಾಣಿಜ್ಯ ಸಂಕೀರ್ಣದಲ್ಲಿ ಒಳಬಾಡಿಗೆ – ವೆಂಕಪ್ಪ ಗೌಡರಿಗೆ ಪತ್ರ
ನಗರ ಪಂಚಾಯತ್ ನ ಹಸಿಕಸವನ್ನು ನಮ್ಮ ಜಾಗಕ್ಕೆ ಸಾಗಾಟ ಮಾಡದಂತೆ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಹಾಲಿ ಸದಸ್ಯರೂ ಆಗಿರುವ ವಿನಯ ಕಂದಡ್ಕರು ನಗರ ಪಂಚಾಯತ್‌ಗೆ ಪತ್ರ ಬರೆದ ಹಾಗೂ ಗಾಂಧಿನಗರದಲ್ಲಿ ಪಂಚಾಯತ್ ವಾಣಿಜ್ಯ ಸಂಕೀರ್ಣದಲ್ಲಿ ಒಳಬಾಡಿಗೆಯ ವ್ಯವಹಾರ ನಡೆಯುತ್ತಿರುವ ಕುರಿತು ನಗರ ಪಂಚಾಯತ್ ಮಾಜಿ ಅಧ್ಯಕ್ಷ ಹಾಲಿ ಸದಸ್ಯರೂ ಆಗಿರುವ ಎಂ.ವೆಂಕಪ್ಪ ಗೌಡರಿಗೆ ಪತ್ರ ಬಂದಿರುವ ಕುರಿತು ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪವಾಯಿತು.















ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಮುಖ್ಯಾಧಿಕಾರಿ ಸುಧಾಕರ್‌ರವರು, ನಮ್ಮ ಜಾಗಕ್ಕೆ ಹಸಿಕಸ ಸಾಗಾಟವನ್ನು ನಿಲ್ಲಿಸಬೇಕೆಂದು ವಿನಯ ಕಂದಡ್ಕರು ಪಂಚಾಯತ್‌ಗೆ ಪತ್ರ ಬರೆದಿರುವ ಕುರಿತು ಮುಂದಿಟ್ಟರು. ಆಗ ಮಾತನಾಡಿದ ವಿನಯ ಕಂದಡ್ಕರು ನಾನು ಅಧ್ಯಕ್ಷನಾಗಿದ್ದಾಗ ಹಸಿಕಸ ಯಾರಾದರೂ ಕೊಂಡು ಹೋಗೋದಿದ್ದರೆ ಹೋಗಲಿ ಎಂದು ಸಾಕಷ್ಟು ಪ್ರಯತ್ನ ಪಡಲಾಗಿತ್ತು. ಆಗ ಕಸ ಕೊಂಡು ಹೋಗುತ್ತಿದ್ದ ವಿನೋದ್ ಲಸ್ರಾದರು ಎರಡೆರಡು ಬಾರಿ ಪತ್ರ ಬರೆದು ನಮ್ಮಲ್ಲಿಗೆ ಕಸ ಬರೋದನ್ನು ನಿಲ್ಲಿಸಿ ಎಂದು ಆಗ್ರಹಿಸಿದ್ದರಿಂದ ಅನಿವಾರ್ಯವಾಗಿ ಬದಲಿ ವ್ಯವಸ್ಥೆ ಆಗಬೇಕೆನ್ನುವ ಕಾರಣಕ್ಕಷ್ಟೇ ದೂರಕ್ಕೆ ನಾವು ಕಸ ಕೊಂಡು ಹೋಗಬೇಕಾಯಿತು. ಈಗ ಏನಾಗಿದೆ ಎಂದರೆ ನಮ್ಮದೇ ಕೆಲವು ಸದಸ್ಯರು ಕೊಟ್ಟ ಮಾಹಿತಿಯೋ ಏನೋ ಗೊತ್ತಿಲ್ಲ. ಹಿಂದಿನ ಅಧ್ಯಕ್ಷರು ಇದರಲ್ಲಿ ಶಾಮೀಲಾಗಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಒಬ್ಬ ಅಧಿಕಾರಿಯ ಬಾಯಲ್ಲಿ ಇಂತ ಮಾತು ಬರಬೇಕಾದರೆ ನಾವು ಕೇಳಿ ಸುಮ್ಮನಿದ್ದರೆ ಶಾಮೀಲಾಗಿzವೆ ಎಂದಾಗ್ತದೆ. ಆ ಅಧಿಕಾರಿ ಬದಲಿ ವ್ಯವಸ್ಥೆ ಮಾಡಲಿ. ನಗರ ಪಂಚಾಯತ್ ಎದುರು ಕಸ ಬೀಳೋದು ಬೇಡ ಎಂಬ ಒಂದೇ ಉzಶದಿಂದ ಕಸ ಕೊಂಡು ಹೋಗಿzವೆ. ಈಗ ನಮ್ಮ ಮೇಲೆ ಆರೋಪ ಬಂದಿದೆ. ಆದ್ದರಿಂದ ನಮಗೆ ಬೇಡ. ಅದನ್ನು ನಿಲ್ಲಿಸಬೇಕೆಂದು ನಮ್ಮ ಆಗ್ರಹ ಎಂದು ಅವರು ಹೇಳಿದರು.
ಆಗ ಮಾತನಾಡಿದ ಎಂ.ವೆಂಕಪ್ಪ ಗೌಡರು '`ದೂರು ಬಂದಿದೆ ಎಂದ ಕೂಡಲೇ ಅದನ್ನು ನಂಬೋದಾ? ಅದರ ಸಾಧಕ ಬಾಧಕಗಳ ಕುರಿತು ನಾವು ಮಾತನಾಡಬೇಕಲ್ಲವೇ?'' ಎಂದು ಹೇಳಿದರು. ಆಗ ಮುಖ್ಯಾಧಿಕಾರಿಯವರು ಈ ಕುರಿತು ಸೋಮವಾರ ಮತ್ತೆ ಸಭೆ ಸೇರಿ ಚರ್ಚಿಸೋಣ ಎಂದು ಹೇಳಿದ ಮೇರೆಗೆ ಚರ್ಚೆಗೆ ತೆರೆಬಿತ್ತು. ಮುಂದಿನ ಒಂದು ತಿಂಗಳ ಕಾಲ ಬೇಕಾದರೆ ನಾನು ಕೊಂಡು ಹೋಗುವುದಾಗಿ ವಿನೋದ್ ಲಸ್ರಾದೋ ಹೇಳಿದ್ದಾರೆಂದು ಮುಖ್ಯಾಧಿಕಾರಿ ಮಾಹಿತಿ ನೀಡಿದರು. ವೆಂಕಪ್ಪ ಗೌಡರಿಗೆ ಪತ್ರ ಸಭೆಯಲ್ಲಿ ಮಾತನಾಡಿದ ಎಂ.ವೆಂಕಪ್ಪ ಗೌಡರು,ಗಾಂಧಿನಗರದಲ್ಲಿರುವ ಪಂಚಾಯತ್‌ನ ವಾಣಿಜ್ಯ ಸಂಕೀರ್ಣದಲ್ಲಿ ಒಳ ಬಾಡಿಗೆ ನಡೆಯುತ್ತಿರುವ ಕುರಿತು ನನಗೆ ಪತ್ರ ಬಂದಿದೆ ಎಂದು ಸಭೆಯ ಮುಂದೆ ಪತ್ರವನ್ನಿಟ್ಟರು. ಅದನ್ನು ಓದಿದ ವೆಂಕಪ್ಪ ಗೌಡರು ನಾರಾಯಣ ಎಂಬವರು ಈ ಪತ್ರ ಬರೆದಿದ್ದು, “ವಾಣಿಜ್ಯ ಸಂಕೀರ್ಣದಲ್ಲಿ ಒಂದು ಕೊಠಡಿಗೆ ಲೈಸೆನ್ಸ್ ಇದೆ. ೫ ಕೊಠಡಿಗೆ ಲೈಸೆನ್ಸ್ ಇಲ್ಲದೇ ವ್ಯವಹಾರ ನಡೆಯುತ್ತಿದೆ. ಅದು ದಲಿತರಿಗೆ ಮೀಸಲಾಗಿದ್ದು ಒಬ್ಬರೇ ಒಬ್ಬರು ಆ ಸಮುದಾಯದವರು ವ್ಯವಹಾರ ನಡೆಸುತ್ತಿಲ್ಲ. ೨೪೦೦ ರೂ ವಿಗೆ ಏಲಂ ಆದುದನ್ನು ೧೫ ಸಾವಿರಕ್ಕೆ ಒಳ ಬಾಡಿಗೆ ನೀಡಲಾಗಿದೆ. ತಿಂಗಳಿಗೆ ೮೦ ಸಾವಿರ ರೂ.ವಿನಷ್ಟು ಅಲ್ಲಿಂದ ಒಬ್ಬ ಬಿಜೆಪಿಯ ರಿಕ್ಷಾ ಚಾಲಕರು ಬಂದು ಬಾಡಿಗೆ ಕಲೆಕ್ಟ್ ಮಾಡಿಕೊಂಡು ಹೋಗಿ ನಗರ ಪಂಚಾಯತ್ ಅಧಿಕಾರಿಗಳಿಗೆ ತಿನ್ನಿಸುತ್ತಿದ್ದಾರೆ. ಇದನ್ನು ಯಾರೂ ಕೇಳೋದಿಲ್ಲ. ೧೩ ವರ್ಷದಿಂದ ಈ ರೀತಿ ನಡೆಯುತ್ತಿದೆ ಇತ್ಯಾದಿ ಮಾಹಿತಿ ಇರುವ ಪತ್ರ ಬಂದಿದೆ ಎಂದು ಹೇಳಿದರು. ಈ ಪತ್ರವನ್ನು ಅಧಿಕಾರಿಗಳಿಗೆ ನೀಡಿದ ಅವರು ಈ ಪತ್ರವನ್ನು ಪೂರ್ತಿ ಸುಳ್ಳು ಎಂದು ಹೇಳಲು ಬರುವುದಿಲ್ಲ. ಮುಂದಿನ ಸಭೆಗೆ ಆ ವಾಣಿಜ್ಯ ಸಂಕೀರ್ಣದ ವಿವರ ಸಭೆಗೆ ಇಡಬೇಕೆಂದು ಅವರು ಹೇಳಿದರು.










