ಯಾವುದೇ ಸಮಸ್ಯೆಗಳನ್ನು ಮುಚ್ಚಿಡದೆ ಪೋಷಕರು, ಶಿಕ್ಷಕರ ಜೊತೆ ಚರ್ಚಿಸಿ: ಎ.ಎಸ್.ಐ ತಾರಾನಾಥ್
ನಾಯಕರು ಬರಿ ನಾಯಕರಾಗದೆ ಜವಾಬ್ದಾರಿಯುತ ನಾಯಕರಾಗಬೇಕು: ಅರುಣ್ ಕುಮಾರ್
ಸುಳ್ಯದ ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ 2025-26ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಸಂಸತ್ ಮಂತ್ರಿಮಂಡಲದ ಪದಗ್ರಹಣ ‘ ಸಮಾರಂಭವು ಜು.3 ರಂದು ಸುಳ್ಯದ ಕುರುಂಜಿ ವೆಂಕಟರಮಣ ಗೌಡ ಸಮುದಾಯ ಭವನದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಶಾಲಾ ಸಂಚಾಲಕ ಡಾ. ರೇಣುಕಾ ಪ್ರಸಾದ್ ಕೆ ವಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾದ ಆಗಮಿಸಿದ ಸುಳ್ಯದ ಎ ಎಸ್.ಐ ತಾರಾನಾಥ್, ಎ.ಒ.ಎಲ್.ಇ ಕಮಿಟಿ ಬಿ ಆಡಳಿತಾಧಿಕಾರಿ ಭವಾನಿ ಶಂಕರ್ ಅಡ್ತಲೆ, ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲಿನ ಆಡಳಿತ ಮಂಡಳಿಯ ಸದಸ್ಯರಾಗಿರುವ ಬಾಲಗೋಪಾಲ್ ಸೇರ್ಕಜೆ ಮತ್ತು ಸಂತೋಷ್ ಕುತ್ತಮುಟ್ಟೆ ಇವರನ್ನು ಇವರನ್ನು ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್, ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ ಹಾಗೂ ವಿದ್ಯಾರ್ಥಿ ನಾಯಕರು ಪಥಸಂಚಲನದ ಮೂಲಕ ಕಾರ್ಯಕ್ರಮಕ್ಕೆ ಬರಮಾಡಿಕೊಂಡರು.

ವಿದ್ಯಾರ್ಥಿನಿಯರು ಪ್ರಾರ್ಥನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಶಾಲಾ ನಾಯಕನಾಗಿ ಅಧಿಕಾರವನ್ನು ಪಡೆದ ಶ್ರೀಹರಿ ಎಸ್, ಉಪನಾಯಕ ಮೋಹಕ್ ಕೆ, ಶಾಲಾ ನಾಯಕಿ ಸ್ಕಂದದಿಯ ಕಲ್ಲಾಜೆ, ಉಪನಾಯಕಿ ಪ್ರತಿಕ್ಷ, ಸಾಂಸ್ಕೃತಿಕ ಮಂತ್ರಿ ಸೋನಾ ನಾರ್ಕೂಡು, ಉಪ ಸಾಂಸ್ಕೃತಿಕ ಮಂತ್ರಿ ನಿಧಿ ಪಿ.ಎಚ್, ಶಿಕ್ಷಣ ಮಂತ್ರಿ ಮನ್ವಿತಾ ಸಿ.ಎಚ್, ಉಪ ಶಿಕ್ಷಣ ಮಂತ್ರಿ ನಿಯಾ ಶೆಟ್ಟಿ, ಶಿಸ್ತಿನ ಮಂತ್ರಿ ಅಲಿಸ್ಬ ಸಾರ, ಉಪಶಿಸ್ತಿನ ಮಂತ್ರಿ ಮಾನ್ವಿ ಎ.ವೈ, ಆರೋಗ್ಯ ಮತ್ತು ನೈರ್ಮಲ್ಯ ಮಂತ್ರಿ ಆಯಿಷತ್ ಉಮ್ಮಲ್ ಫಿದಾ, ಉಪ ಆರೋಗ್ಯ ಮತ್ತು ನೈರ್ಮಲ್ಯ ಮಂತ್ರಿ ಕ್ಷಿತಿ ಎನ್ ಮುರೂರ್, ಕ್ರೀಡಾ ಮಂತ್ರಿ ಆಯಿಷಾ ನಶ್ವ, ಉಪ ಕ್ರೀಡಾ ಮಂತ್ರಿ ವೀಕ್ಷಿತ್ ಎ.ಎಸ್, ಶಾಲಾ ಕ್ಯಾಬಿನೆಟ್ ನಾಯಕರು ಮತ್ತು ಶಾಲೆಯ ನಾಲ್ಕು ತಂಡದ ನಾಯಕರುಗಳಿಗೆ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಪದವಿ ಪದಕ ನೀಡಿ, ವಿದ್ಯಾರ್ಥಿಗಳು ನಾಯಕತ್ವದ ಗುಣವನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಪ್ರಾಂಶುಪಾಲರಾದ ಅರುಣ್ ಕುಮಾರ್ ‘ ಶಾಲೆಯ ಅಭಿವೃದ್ಧಿಗೆ ಅತೀ ಶ್ರದ್ದೆಯಿಂದ ಕೆಲಸ ನಿರ್ವಹಿಸಬೇಕು ಎಂದು ಪ್ರತಿಜ್ಞಾವಿಧಿ ಬೋಧಿಸಿದರು.















ವಿದ್ಯಾರ್ಥಿ ತಂಡದ ನಾಯಕ ಶ್ರೀಹರಿ ಎಸ್ , ನಾಯಕಿ ಸ್ಕಂದದಿಯಾ ಕಲ್ಲಾಜೆ, ನಾವು ನಮ್ಮ ಕರ್ತವ್ಯವನ್ನು ಅತಿ ಶ್ರದ್ಧೆಯಿಂದ ಮತ್ತು ಜವಾಬ್ದಾರಿಯಿಂದ ಮಾಡುತ್ತೇವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸುಳ್ಯದ ಎ.ಎಸ್.ಐ ತಾರಾನಾಥ್ ‘ ಮಕ್ಕಳು ಯಾವುದೇ ಸಮಸ್ಯೆಗಳನ್ನು ಮುಚ್ಚಿಡದೆ ಪೋಷಕರಲ್ಲಿ ಅಥವಾ ಶಿಕ್ಷಕರಲ್ಲಿ ಚರ್ಚಿಸಬೇಕು. ಸಂಚಾರಿ ನಿಯಮಗಳನ್ನು ಪಾಲಿಸಿ, ಕಲಿಕೆಯಲ್ಲಿ ಮಾತ್ರ ಮುಂದುವರಿಯದೆ ಎಲ್ಲಾ ಚಟುವಟಿಕೆಯಲ್ಲಿ ಮುಂದುವರಿದು ಕೆವಿಜಿ ಶಿಕ್ಷಣ ಸಂಸ್ಥೆಗೆ ಒಂದು ಒಳ್ಳೆಯ ಹೆಸರನ್ನು ತಂದು ಕೊಡ ಬೇಕು. ಮೊಬೈಲಿನಿಂದ ದೂರವಿದ್ದು ಗುರಿಯ ಕಡೆಗೆ ಮುನ್ನುಗ್ಗಿ ಎಂದು ಹೇಳಿದರು. ಕೆವಿಜಿ ಎ.ಒ.ಎಲ್.ಇ ಕಮಿಟಿ ‘ಬಿ’ಯ ಆಡಳಿತಾಧಿಕಾರಿ ಭವಾನಿ ಶಂಕರ ಅಡ್ತಲೆ ‘ ಉನ್ನತ ಶಿಕ್ಷಣ ಪಡೆದು ದೇಶ ಸೇವೆಗೆ ಮುನ್ನುಗ್ಗಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿ, ಕಾನೂನಿನ ಅರಿವು ಮೂಡಿಸಲು ಶಾಲೆಯು ಆಯೋಜಿಸಿದ ಈ ಕಾರ್ಯಕ್ರಮ ಎಲ್ಲರು ಮೆಚ್ಚುವಂತದ್ದು ಎಂದರು. ಬಳಿಕ ಮಾತಾಡಿದ ಸಂತೋಷ್ ಕುತ್ತಮುಟ್ಟೆ ‘ ಕನಸು ಇದ್ದರೆ ಗುರಿ ಸಾಧನೆ ಸುಲಭ. ಎಲ್ಲರೊಂದಿಗೂ ಸ್ನೇಹದಿಂದ ಇದ್ದು, ನೀವು ಇನ್ನೊಬ್ಬರಿಗೆ ಮಾದರಿಯಾಗಬೇಕೆಂದು ‘ ಹೇಳಿದರು. ಕೆವಿಜಿ ಐಪಿಎಸ್ ನ ಪ್ರಾಂಶುಪಾಲ ಅರುಣ್ ಕುಮಾರ್ ‘ ವಿದ್ಯಾರ್ಥಿಗಳಿಗೆ ನಾಯಕತ್ವ ಕೊಡುವುದು ಅತಿ ಉತ್ತಮ. ಇದರಿಂದ ವಿದ್ಯಾರ್ಥಿಗಳಿಗೆ ಜವಾಬ್ದಾರಿ ಹೆಚ್ಚಾಗುತ್ತದೆ. ನಾಯಕರು ಬರಿ ನಾಯಕರಾಗದೆ ಜವಾಬ್ದಾರಿಯುತ ನಾಯಕರಾಗಬೇಕು. ನಾನು ಚೆನ್ನಾಗಿ ನನ್ನ ಕರ್ತವ್ಯಗಳನ್ನು ನಿಭಾಯಿಸುತ್ತೇನೆ ಎಂಬ ಪ್ರತಿಜ್ಞೆ ಮಾಡಿ ಶಿಸ್ತುಬದ್ಧರಾಗಿ ಕರ್ತವ್ಯ ನಿರ್ವಹಿಸಿ ಎಂದರು.
ಕಾರ್ಯಕ್ರಮವನ್ನು ಹತ್ತನೇ ತರಗತಿಯ ಶ್ರದ್ಧಾ ಪೈ ಮತ್ತು ಸೀಮಾ ಆಯಿಷಾ ನಿರೂಪಿಸಿದರು. ಶಮ್ಯ ಸ್ವಾಗತಿಸಿ, ಮೋಹಕ್ ವಂದಿಸಿದರು. ಅತಿಥಿಗಳ ಪರಿಚಯವನ್ನು ಸ್ಪಂದನ ಮಾಡಿದರು. ಕಾರ್ಯಕ್ರಮದಲ್ಲಿ ಕೆವಿಜಿ ಅಮರಜ್ಯೋತಿ ಕಾಲೇಜಿನ
ಪ್ರಾಂಶುಪಾಲೆ ಡಾ. ಯಶೋಧ ರಾಮಚಂದ್ರ, ಕೆ.ವಿ.ಜಿ ಐಟಿಐ ಪ್ರಾಂಶುಪಾಲ ದಿನೇಶ್ ಮಡ್ತಿಲ, ಕೆವಿಜಿ ಡೆಂಟಲ್ ಕಾಲೇಜಿನ ಮಾಧವ ಬಿ.ಟಿ, ಕೆವಿಜಿ ಆಡಳಿತ ಮಂಡಳಿಯ ಪ್ರಸನ್ನ ಕಲ್ಲಾಜೆ, ಪದ್ಮನಾಭ, ದಯಾನಂದ ಅಟ್ಲೂರು, ವಸಂತ ಮತ್ತು ಪೋಷಕರು, ವಿದ್ಯಾರ್ಥಿಗಳು, ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.










