ರಸ್ತೆಯಲ್ಲಿ ಅಗೆದು ಹಾಕಿದ ಹೊಂಡ ಗುಂಡಿಗಳಿಂದಾಗಿ ಕಂಗಾಲಾದ ಜನಸಾಮಾನ್ಯರು ಹಾಗೂ ವರ್ತಕರು

0

ಗುಂಡಿಗಳನ್ನು ಮುಚ್ಚದೆ ಬೇಜವಾಬ್ದಾರಿ ತೋರುತ್ತಿರುವ ನಗರಾಡಳಿತ : ಶರೀಫ್ ಕಂಠಿ ಅಸಮಾಧಾನ

ಪ್ರತೀ ಬಾರಿ ನಗರ ಪಂಚಾಯತ್ ಸಭೆಯಲ್ಲಿ ನಾವು ನಗರದ ಸಮಸ್ಯೆ ಬಗ್ಗೆ ಧ್ವನಿ ಎತ್ತುವಾಗ ಅಮೃತ್ ೨ ಪೈಪ್ ಲೈನ್ ಕಾಮಗಾರಿಯ ಅಧಿಕಾರಿಗಳನ್ನು ಕರೆಸಿ ರಸ್ತೆಯನ್ನು ಸರಿಪಡಿಸುವ ಭರವಸೆ ನೀಡುವುದಲ್ಲದೆ ಯಾವುದೇ ಸಮಸ್ಯೆಯನ್ನು ಸರಿಪಡಿಸುವ ಬಗ್ಗೆ ಯಾವುದೆ ಚಿಂತನೆ ಆಡಳಿತ ಪಕ್ಷಕ್ಕೆ ಇಲ್ಲ. ಬಿಜೆಪಿ ಪಕ್ಷ ಆಡಳಿತ ವೈಫಲ್ಯದಿಂದಾಗಿ ಸುಳ್ಯ ನಗರ ಜನತೆಯ ವಿಸ್ವಾಸ ಕಳೆದುಕೊಂಡಂತಾಗಿದೆ.


ನಗರದ ಜನತೆಗೆ ನೀರು ಮತ್ತು ರಸ್ತೆ ವಿಷಯದಲ್ಲಿ ಬಾರಿ ಕಂಗಾಲಾಗಿದ್ದಾರೆ. ಜಯನಗರ ರಸ್ತೆಯಲ್ಲಂತೂ ನಡೆದಾಡಲು ಸಾಧ್ಯವಾಗದ ರೀತಿಯಲ್ಲಿ ರಸ್ತೆಯಲ್ಲಿರುವ ಗುಂಡಿಗಳಿಗೆ ಕೆಂಪು ಮಣ್ಣು ಹಾಕಿ ಕೆಸರುಮಯ ಮಾಡಿಬಿಟ್ಟಿದ್ದಾರೆ ಎಂದು ನ ಪಂ ಸಭೆಯಲ್ಲಿ ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿಯವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.