ಭಾರತೀಯ ದಂತ ವೈದ್ಯಕೀಯ ಸಂಘದ ಸುಳ್ಯ ಶಾಖೆಯಲ್ಲಿ ನಿರಂತರ ದಂತ ಶಿಕ್ಷಣದ ಕಾರ್ಯಕ್ರಮ

0

ಭಾರತೀಯ ದಂತ ವೈದ್ಯಕೀಯ ಸಂಘದ ಸುಳ್ಯ ಶಾಖೆಯಲ್ಲಿ ನಿರಂತರ ದಂತ ಶಿಕ್ಷಣದ ಕಾರ್ಯಕ್ರಮವು ಜೂ. 30ರಂದು ಕೆವಿಜಿ ದಂತ ಮಹಾ ವಿದ್ಯಾಲಯದ ಸಭಾಂಗಣದಲ್ಲಿ ನಡೆಯಿತು.


ಈ ಸಂದರ್ಭದಲ್ಲಿ, ಖಾಸಗಿ ದಂತ ಚಿಕಿತ್ಸಾಲಯಗಳಲ್ಲಿ ಮಕ್ಕಳ ಆರೋಗ್ಯ ಮತ್ತು ನಡವಳಿಕೆಯ ನಿರ್ವಹಣೆ’ ಎನ್ನುವ ವಿಚಾರದ ಕುರಿತು ಕೆವಿಜಿ ದಂತ ಮಹಾವಿದ್ಯಾಲಯದ ಮಕ್ಕಳ ದಂತ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ. ಸವಿತಾ ಸತ್ಯಪ್ರಸಾದ್ ಅತಿಥಿ ಉಪನ್ಯಾಸ ನೀಡಿದರು.

ಐಡಿಎ ಸುಳ್ಯ ಶಾಖೆಯ ಅಧ್ಯಕ್ಷ ಡಾ. ಪ್ರಸನ್ನ ಕುಮಾರ್ ಅಧ್ಯಕ್ಷತೆ ವಹಿಸಿ ಸಮಾರಂಭವನ್ನು ಉದ್ಘಾಟಿಸಿದರು. ಡಾ. ಕಿಶನ್ ರಾಜ್ ಅತಿಥಿಯನ್ನು ಪರಿಚಯಿಸಿದರು. ಕಾರ್ಯದರ್ಶಿ ಡಾ. ಜಯಪ್ರಸಾದ ಆನೆಕಾರ ಕಾರ್ಯಕ್ರಮವನ್ನು ನಿರ್ವಹಿಸಿ, ವಂದಿಸಿದರು. 50 ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿ ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದರು.


ಕಾಲ್ಗೇಟ್ ಇಂಡಿಯಾ ಕಂಪೆನಿ ಮತ್ತು ಭಾರತೀಯ ದಂತ ವೈದ್ಯಕೀಯ ಸಂಘದ ಮಹಿಳಾ ಪರಿಷತ್ತು ಈ ಕಾರ್ಯಕ್ರಮವನ್ನು ಪ್ರಾಯೋಜಿಸಿದ್ದವು.