ಸುಳ್ಯದ ಸೈಂಟ್ ಜೋಸೆಫ್ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಕರ ಪ್ರಥಮ ಸಭೆ ಜು.3 ರಂದು ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಸುಳ್ಯ ಸಂತ ಬ್ರಿಜಿಡ್ಸ್ ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷರಾದ ನವೀನ್ ಮಚಾದೋ , ಪ್ರಾಥಮಿಕ ಶಾಲಾ ಪೋಷಕ ಸಮಿತಿಯ ಉಪಾಧ್ಯಕ್ಷರಾದ ಶಶಿಧರ್ ಎಂ.ಜೆ., ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಮೇರಿ ಸ್ಟೆಲ್ಲ, ಶಿಕ್ಷಕ ಕಾರ್ಯದರ್ಶಿ ಶ್ರೀಮತಿ ಭವ್ಯ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
















\
ಶಿಕ್ಷಕಿ ಶ್ರೀಮತಿ ಮಮತ ರವರು ಸ್ವಾಗತಿಸಿದರು.ಶಿಕ್ಷಕ ಕಾರ್ಯದರ್ಶಿ ಶ್ರೀಮತಿ ಭವ್ಯ ವರದಿ ವಾಚಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಮೇರಿ ಸ್ಟೆಲ್ಲ ಸಲಹೆ ಸೂಚನೆ ನೀಡಿದರು. ಪ್ರಾಥಮಿಕ ಶಾಲಾ ಪೋಷಕ ಸಮಿತಿಯ ಅಧ್ಯಕ್ಷರಾದ ಶಶಿಧರ್ ಎಂ.ಜೆ ಸಭೆಯನ್ನುದೇಶಿಸಿ ಮಾತನಾಡಿದರು. ತದನಂತರ ನೂತನ ಪೋಷಕ ಸಮಿತಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನೆರವೇರಿತು. ಕಾರ್ಯಕ್ರಮ ವನ್ನು ಉದ್ದೇಶಿಸಿ ನವೀನ್ ಮಚಾದೋ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಶಿಕ್ಷಕಿ ಶ್ರೀಮತಿ ಚೈತ್ರಾ ರವರು ವಂದನಾರ್ಪಣೆಗೈದರು ಹಾಗೂ ಶಿಕ್ಷಕ ಭಾನುಪ್ರಕಾಶ್ ಹಾಗೂ ಶಿಕ್ಷಕಿ ಶ್ರೀಮತಿ ಭಾರತಿ ಇವರು ಕಾರ್ಯಕ್ರಮ ನಿರೂಪಿಸಿದರು. ಎಲ್ಲಾ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಸಹಕರಿಸಿದರು.










